ಕರ್ನಾಟಕ

karnataka

ETV Bharat / city

ರಾಜಕೀಯ ದುರುದ್ದೇಶದಿಂದ ಎಸ್​ಡಿಪಿಐ ಮುಖಂಡನ ಬಂಧನವಾಗಿದೆ: ಕಾರ್ಯಕರ್ತರ ಆಗ್ರಹ - Social Democratic Party Up India

ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ನಮ್ಮ ಬೆಂಗಳೂರು ಅಧ್ಯಕ್ಷ ಷರೀಫ್​ ಹಾಗೂ ಕಾರ್ಯಕರ್ತರನ್ನು ಬಂಧಿಸಿ 400 ಅಮಾಯಕ ಕುಟುಂಬಗಳು ಕಣ್ಣೀರು ಹಾಕುವಂತೆ ಮಾಡಿದೆ. ಆದರೂ ನಮಗೆ ಕಾನೂನಿನ ಮೇಲೆ ಪೂರ್ತಿ ನಂಬಿಕೆ ಇದೆ ಎಂದು ಎಸ್​ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್​ ಕೊಡಲಿಪೇಟೆ ಹೇಳಿದರು.

ಕಾರ್ಯಕರ್ತರ ಆಗ್ರಹ
ಕಾರ್ಯಕರ್ತರ ಆಗ್ರಹ

By

Published : Dec 22, 2020, 5:10 PM IST

ಬೆಂಗಳೂರು:ಡಿ.ಜೆ‌ ಹಳ್ಳಿ ಗಲಭೆ ಪ್ರಕರಣದಲ್ಲಿ ಎಸ್​ಡಿಪಿಐ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಷರೀಫ್ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ‌ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಪ್ ಇಂಡಿಯಾ(ಎಸ್​ಡಿಪಿಐ) ಇವರ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಎಸ್​ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಪ್ ಕೊಡಲಿಪೇಟೆ ಮಾತನಾಡಿ, ಮೋದಿ‌ ಸರ್ಕಾರದಲ್ಲಿ ಹೋರಾಟಗಾರರನ್ನು ದಮನಿಸಲಾಗುತ್ತಿದೆ. ಇದನ್ನು ಎಸ್​ಡಿಪಿಐ ತೀವ್ರವಾಗಿ ಖಂಡಿಸುತ್ತದೆ ಎಂದರು.

ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ನಮ್ಮ ಬೆಂಗಳೂರು ಅಧ್ಯಕ್ಷ ಷರೀಫ್​ ಹಾಗೂ ಕಾರ್ಯಕರ್ತರನ್ನು ಬಂಧಿಸಿ 400 ಅಮಾಯಕ ಕುಟುಂಬಗಳು ಕಣ್ಣೀರು ಹಾಕುವಂತೆ ಮಾಡಿದೆ. ಆದರೂ ನಮಗೆ ಕಾನೂನಿನ ಮೇಲೆ ಪೂರ್ತಿ ನಂಬಿಕೆ ಇದೆ ಎಂದರು.

ಬೆಂಗಳೂರು ಗಲಭೆ ಪ್ರಕರಣ: ಎಸ್​ಡಿಪಿಐ ಅಧ್ಯಕ್ಷ ಸೇರಿ 17 ಮಂದಿ ಆರೋಪಿಗಳ ಬಂಧನ

ಡಿ.ಜೆ ಹಳ್ಳಿ ಗಲಭೆಗೆ ನವೀನ್ ಮೂಲ ಕಾರಣಕರ್ತನಾಗಿದ್ದಾನೆ. ಆತನಿಗೆ ಶಿಕ್ಷೆ ಕೊಡಿಸುವಲ್ಲಿ ಪೊಲೀಸರು ಎಡವಿದ್ದಾರೆ. ಇದು ರಾಜಕೀಯ ದುರುದ್ದೇಶ ಪೂರಿತವಾಗಿ ನಡೆಯುತ್ತಿದೆ. ಈ ಗಲಭೆಯಲ್ಲಿ ಎಸ್​ಡಿಪಿಐ ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷಿಯಿಲ್ಲ. ಆದರೆ, ತನಿಖಾ ಸಂಸ್ಥೆಯನ್ನು ಬಳಸಿಕೊಂಡು‌ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.

ಅಮಾಯಕರ ಮೇಲೆ UAPA ಕಾಯ್ದೆ ಹಾಕುತ್ತಿದ್ದಾರೆ.‌ ಹೀಗಾಗಿ ರಾಜ್ಯದ ಮೂಲೆ ಮೂಲೆಗಳಲ್ಲೂ ಪ್ರತಿಭಟನೆ ಮಾಡ್ತೇವೆ. ಅಮಾಯಕರಿಗೆ ಶಿಕ್ಷೆ ಆಗುವುದನ್ನು ತಪ್ಪಿಸೋದಕ್ಕೆ ನಾವು ಹೋರಾಟ ಮಾಡ್ತೇವೆ ಎಂದು ಆಕ್ರೋಶ ಹೊರ ಹಾಕಿದರು.

ABOUT THE AUTHOR

...view details