ಕರ್ನಾಟಕ

karnataka

ETV Bharat / city

ಪಠ್ಯಪುಸ್ತಕ ಪರಿಷ್ಕರಣೆ ಹಿಂಪಡೆದು, ಹಿಂದಿನ ಪುಸ್ತಕಗಳನ್ನೇ ಆದಷ್ಟು ಬೇಗ ನೀಡಿ: ಪೋಷಕರು, ಶಿಕ್ಷಣ ತಜ್ಞರ ಆಗ್ರಹ

ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯ ಸಾಂವಿಧಾನಿಕ ಆಶಯಗಳನ್ನು ಉಲ್ಲಂಘಿಸಿ ರಚನೆಯಾಗಿರುವ ಪಠ್ಯ ಪರಿಷ್ಕರಣ ಸಮಿತಿಯ ರಚನೆಯೇ ಅಸಂವಿಧಾನಕವಾಗಿದೆ. ಹೀಗಾಗಿ ಪಠ್ಯಪರಿಷ್ಕರಣ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

Textbook reformation Get back and give old book to students
ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೂಡಲೇ ಹಿಂಪಡೆದು ಹಿಂದಿನ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ನೀಡಿ

By

Published : May 23, 2022, 8:23 PM IST

ಬೆಂಗಳೂರು: ಪ್ರಸಕ್ತ ಸಾಲಿನ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೂಡಲೇ ಹಿಂಪಡೆದು, ಹಿಂದಿನ ಪಠ್ಯವನ್ನೇ ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ನೀಡಬೇಕು. ಎರಡು ವರ್ಷಗಳಲ್ಲಿ ಕೊರೊನಾದಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕಾಗಿದೆ. ಪರಿಷ್ಕರಣೆ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಬೇಡಿ ಎಂದು ವಿದ್ಯಾರ್ಥಿ ಸಂಘಟನೆ, ಪೋಷಕರ ಸಂಘಟನೆಗಳು ಹಾಗು ಶಿಕ್ಷಣ ತಜ್ಞರು ಆಗ್ರಹಿಸಿದರು.

ಸೋಮವಾರ ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಖಾಸಗಿ ಶಾಲಾ-ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿಯ ಬಿ.ಎನ್. ಯೋಗಾನಂದ ಕಳೆದ ಎರಡು ವರ್ಷಗಳಲ್ಲಿ ಕೊರೊನಾದಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕಾಗಿದ್ದು, ಈ ಬಾರಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವಲ್ಲಿ ಭಗತ್ ಸಿಂಗ್, ನಾರಾಯಣಗುರು, ಪೆರಿಯಾರ್ ಕುರಿತಾದ ಪಠ್ಯಗಳನ್ನು ಹಾಗೂ ಸಾರಾ ಅಬೂಬಕರ್, ಲಂಕೇಶ್, ಡಾ.ಜಿ. ರಾಮಕೃಷ್ಣ ಸೇರಿದಂತೆ ಅನೇಕರ ಬರಹಗಳನ್ನು ತೆಗೆದುಹಾಕಿ, ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಹೆಸರಿನಲ್ಲಿ ದ್ವೇಷ ಹರಡುವ ಪಠ್ಯಗಳನ್ನು ಕೊಡಲಾಗುತ್ತಿದೆ ಎಂದು ಆರೋಪಿಸಿದರು.

ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯ ಸಾಂವಿಧಾನಿಕ ಆಶಯಗಳನ್ನು ಉಲ್ಲಂಘಿಸಿ ರಚನೆಯಾಗಿರುವ ಪಠ್ಯ ಪರಿಷ್ಕರಣ ಸಮಿತಿಯ ರಚನೆಯೇ ಅಸಂವಿಧಾನಿಕವಾಗಿದೆ. ಈ ಹಿನ್ನೆಲೆಯಲ್ಲಿ ಪಠ್ಯಪರಿಷ್ಕರಣ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕಪ್ಪು ಬಾವುಟ ಪ್ರದರ್ಶನ:ಸರ್ಕಾರ ಮಕ್ಕಳ ಕಲಿಕೆ ಮತ್ತು ಬೆಳವಣಿಗೆಗೆ ಅಪಾಯಕಾರಿಯಾದ ಪಠ್ಯಗಳನ್ನು ಸಮರ್ಥಿಸುವ ಮತ್ತು ಅಸಂವಿಧಾನಿಕವಾದ ಪರಿಷ್ಕರಣೆ ಸಮಿತಿಯ ಶಿಪಾರಸುಗಳನ್ನು ಪಠ್ಯಪುಸ್ತಕಗಳ ವಿಚಾರದಲ್ಲಿ ಮುಂದುವರೆಸಿದರೆ, ರಾಜ್ಯಾದ್ಯಂತ ಪ್ರತಿಭಟನೆ ಮತ್ತು ಕಪ್ಪು ಬಾವುಟ ಪ್ರದರ್ಶನದ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.

ಇದನ್ನೂ ಓದಿ:ಭುಗಿಲೆದ್ದ ಪಠ್ಯಪುಸ್ತಕ ಪರಿಷ್ಕರಣೆ ಸೇರ್ಪಡೆ-ಕಡಿತ ವಿಚಾರ.. ಎಲ್ಲದಕ್ಕೂ ಖುದ್ದು ವಿವರಣೆ ನೀಡಿದ್ರು ಶಿಕ್ಷಣ ಸಚಿವ

ABOUT THE AUTHOR

...view details