ಕರ್ನಾಟಕ

karnataka

ETV Bharat / city

Bengaluru Covid: ವಿದೇಶದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ 10 ಮಂದಿಗೆ ಕೋವಿಡ್ - ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದವರಿಗೆ ಸೋಂಕು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಿದೇಶದಿಂದ ಬಂದ 10 ಮಂದಿಯಲ್ಲಿ ಹೊಸದಾಗಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.

Ten people found covid positive who arrived from various countries to bengaluru
Bengaluru Covid: ವಿದೇಶದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ 10 ಮಂದಿಗೆ ಕೋವಿಡ್

By

Published : Jan 12, 2022, 12:43 PM IST

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸಿದ 10 ಜನರಿಗೆ ಕೋವಿಡ್ ಸೋಂಕು ಧೃಡಪಟ್ಟಿದ್ದು, ಅವರ ವರದಿಯನ್ನು ಜೀನೋಮ್ ಸೀಕ್ವೆನ್ಸ್​ಗೆ ರವಾನಿಸಲಾಗಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಮೆರಿಕದಿಂದ ಬಂದ ನಾಲ್ವರು ಪ್ರಯಾಣಿಕರಲ್ಲಿ, ಸೇಂಟ್ ಫ್ರಾನ್ಸಿಸ್ಕೋ, ಟರ್ಕಿ, ಪೋರ್ಚುಗಲ್, ಐರ್ಲೆಂಡ್, ಲಂಡನ್​ನಿಂದ ಆಗಮಿಸಿದ ತಲಾ ಒಬ್ಬ ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಸೋಂಕಿತರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಭಾರತ ಸರ್ಕಾರದ ಇತ್ತೀಚಿನ ಮಾರ್ಗಸೂಚಿಯಂತೆ ವಿದೇಶದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ 7 ದಿನಗಳ ಹೋಮ್ ಕ್ವಾರಂಟೈನ್ ಒಳಗಾಗಬೇಕಿದೆ.

ಇದನ್ನೂ ಓದಿ:Delhi Covid: ಕೇವಲ 12 ದಿನದಲ್ಲಿ ದೆಹಲಿಯ 1,700 ಪೊಲೀಸರಿಗೆ ಸೋಂಕು!

ABOUT THE AUTHOR

...view details