ಬೆಂಗಳೂರು:ಸ್ಯಾಂಡಲ್ವುಡ್ಗೆ ಡ್ರಗ್ಸ್ ಲಿಂಕ್ ಪ್ರಕರಣದ ವಿಚಾರಣೆ ವೇಳೆ ತೆಲುಗು ನಟ ತನೀಶ್ ಕಣ್ಣೀರು ಹಾಕಿದ್ದಾರೆ. ಪೊಲೀಸರ ಬಳಿ ನನ್ನದೇನು ತಪ್ಪಿಲ್ಲ ಸರ್, ಒಮ್ಮೆ ಮಾತ್ರ ಶಂಕರ್ ಗೌಡ ಅವರ ನಿವಾಸದಲ್ಲಿನ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದೆ ಅಷ್ಟೇ ಎಂದು ಅಳಲು ತೊಂಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಮಾರ್ಚ್ 17ರಂದು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರಿಂದ ವಿಚಾರಣೆ ಎದುರಿಸಿದ್ದ ನಟ ತನೀಶ್, ಬೆಂಗಳೂರು ಪೊಲೀಸರು ನೋಟಿಸ್ ಕೊಡುತ್ತಿದ್ದಂತೆ ನನ್ನ ಹೊಸ ಸಿನಿಮಾ ಪ್ರಾಜೆಕ್ಟ್ ಕ್ಯಾನ್ಸಲ್ ಆಯ್ತು. ಮಾರ್ಚ್ 14ಕ್ಕೆ ನನ್ನ ಹೊಸ ಸಿನಿಮಾಗೆ ಸಹಿ ಮಾಡಬೇಕಿತ್ತು ಎಂದು ಪೊಲೀಸರ ಮುಂದೆ ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ ಎನ್ನಲಾಗ್ತಿದೆ.
ನೀವು ನನಗೆ ನೋಟಿಸ್ ಕೊಡುತ್ತಿದ್ದಂತೆ ನನ್ನ ಕೈಯಲ್ಲಿರುವ ಸಿನಿಮಾಗಳಿಂದ ನನ್ನನ್ನು ಕೂಡ ಕೈಬಿಟ್ಟಿದ್ದಾರೆ. ದಯಮಾಡಿ ನನ್ನನ್ನ ಮತ್ತೆ ಕರೀಬೇಡಿ, ಏನಿದ್ದರೂ ಎಲ್ಲವನ್ನು ಈಗಲೇ ಕೇಳಿ ಮುಗಿಸಿ ಎಂದು ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರ ಮುಂದೆ ವಿನಂತಿಸಿಕೊಂಡಿದ್ದಾರೆ.