ಕರ್ನಾಟಕ

karnataka

ETV Bharat / city

ಧರ್ಮದ ಉಳಿವಿಗೆ ಹಿಂದೂಗಳಿಂದಲೇ ರಾಜ್ಯ ಆಳ್ವಿಕೆಯಾಗ್ಬೇಕು: ತೇಜಸ್ವಿ ಸೂರ್ಯ

ಧರ್ಮದ ಉಳಿವಿಗಾಗಿ ಹಿಂದೂಗಳಿಂದ ರಾಜ್ಯದ ಅಧಿಕಾರವನ್ನು ನಿಯಂತ್ರಿಸುವುದು ಅತ್ಯಗತ್ಯ ಎಂಬುದು ಪ್ರಮುಖ ಪಾಠವಾಗಿದೆ. ನಾವು ರಾಜ್ಯವನ್ನು ನಿಯಂತ್ರಿಸದಿದ್ದಾಗ, ನಾವು ನಮ್ಮ ದೇವಾಲಯವನ್ನು ಕಳೆದುಕೊಂಡಿದ್ದೇವೆ. ನಾವು ಮರಳಿ ಅಧಿಕಾರ ಪಡೆದಾಗ, ಕಳೆದುಕೊಂಡ ದೇವಾಲಯಗಳನ್ನು ಪುನರ್‌ ನಿರ್ಮಿಸಿದ್ದೇವೆ ಎಂದು ಸಂಸದ ತೇಜಸ್ವಿ ಸೂರ್ಯ​ ವಿವಾದಾತ್ಮಕ ಟ್ವೀಟ್​ ಮಾಡಿದ್ದಾರೆ.

Tejaswi Surya controversial tweet
ತೇಜಸ್ವಿ ಸೂರ್ಯ

By

Published : Aug 5, 2020, 5:33 PM IST

ಬೆಂಗಳೂರು:ಹಿಂದೂ ಧರ್ಮದ ಉಳಿವಿಗಾಗಿ ಹಿಂದೂಗಳಿಂದಲೇ ರಾಜ್ಯದ ಆಳ್ವಿಕೆಯಾಗಬೇಕು ಎಂದು ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕವಾಗಿ ಟ್ವೀಟ್ ಮಾಡಿ ಪ್ರಗತಿಪರ ಚಿಂತಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತೇಜಸ್ವಿ ಸೂರ್ಯ

ಧರ್ಮದ ಉಳಿವಿಗಾಗಿ ಹಿಂದೂಗಳಿಂದ ರಾಜ್ಯದ ಅಧಿಕಾರವನ್ನು ನಿಯಂತ್ರಿಸುವುದು ಅತ್ಯಗತ್ಯ ಎಂಬುದು ಪ್ರಮುಖ ಪಾಠವಾಗಿದೆ. ನಾವು ರಾಜ್ಯವನ್ನು ನಿಯಂತ್ರಿಸದಿದ್ದಾಗ, ನಾವು ನಮ್ಮ ದೇವಾಲಯವನ್ನು ಕಳೆದುಕೊಂಡಿದ್ದೇವೆ. ನಾವು ಮರಳಿ ಅಧಿಕಾರ ಪಡೆದಾಗ, ಕಳೆದುಕೊಂಡ ದೇವಾಲಯಗಳನ್ನು ಪುನರ್ನಿರ್ಮಿಸಿದ್ದೇವೆ.

2014 ರಲ್ಲಿ 282 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮತ್ತು 2019 ರಲ್ಲಿ 303 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ, ದೇವಾಲಯ ಪುನರ್ ನಿರ್ಮಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಸಾಧ್ಯವಾಗಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇದೀಗ ತೇಜಸ್ವಿ ಸೂರ್ಯ ಟ್ವೀಟ್​ಗೆ ಪ್ರಗತಿಪರ ಚಿಂತಕರು ಆಕ್ಷೇಪ ವ್ಯಕ್ತಪಡಿಸಿದ್ದು, ತೇಜಸ್ವಿ ಸೂರ್ಯ ಅವರದ್ದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಎಂದು ಟೀಕಿಸಿದ್ದಾರೆ.

ABOUT THE AUTHOR

...view details