ಬೆಂಗಳೂರು :ಕೋವಿಡ್-19 ವಿಶೇಷ ಸರ್ವೇಕ್ಷಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಬಿಬಿಎಂಪಿ ಸಿದ್ಧಗೊಂಡಿದೆ. ಪ್ರಸ್ತುತ ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಶೇಷ ಸರ್ವೇಕ್ಷಣಾ ಚಟುವಟಿಕೆಯನ್ನು ಹಮ್ಮಿಕೊಳ್ಳಲು ತಯಾರಿ ನಡೆದಿದೆ.
ಪಾಲಿಕೆಯ ವಲಯ ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳ ಸೂಚನೆಯಂತೆ ತಂಡ-1 ಕಂದಾಯ ಇಲಾಖೆಯ ತಂಡ 72 ಗಂಟೆಯೊಳಗೆ ಮಾಡಿಸಿದ ಆರ್‌ಟಿಪಿಆರ್ ನೆಗಟಿವ್ ವರದಿಯನ್ನು ಹೊಂದಿರುವ ಪ್ರಯಾಣಿಕರನ್ನು ತಪಾಸಣೆ ನಡೆಸುವ ಕೆಲಸ ವಹಿಸಲಾಗಿದೆ. ಹಾಗೇ ತಂಡ-2 ಆರೋಗ್ಯ ಇಲಾಖೆಯ ಪರೀಕ್ಷಾ ತಂಡವು ಕೋವಿಡ್-19 ಆರ್‌ಟಿಪಿಸಿಆರ್ ಪರೀಕ್ಷೆಗೆ ಪ್ರಯಾಣಿಕರನ್ನ ಒಳಪಡಿಸಬೇಕು.
ಎಲ್ಲಿಲ್ಲಿ ತಂಡ ಇರಲಿದೆ?:
- ತಂಡ-1: ಕಂದಾಯ ಇಲಾಖೆಯ ತಪಾಸಣಾ ತಂಡ
1.ಮೆಜೆಸ್ಟಿಕ್ ರೈಲ್ವೆ ನಿಲ್ದಾಣ
2. ಮೆಜೆಸ್ಟಿಕ್ ಬಸ್ ನಿಲ್ದಾಣ
3.ಮೈಸೂರು ರೋಡ್ ಸ್ಯಾಟಲೈಟ್ ಬಸ್ ನಿಲ್ದಾಣ
4. ಯಶವಂತಪುರ ಬಸ್ ನಿಲ್ದಾಣ
5. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ
6. ಶಾಂತಿನಗರ ಸ್ಯಾಟಲೈಟ್ ಬಸ್ ನಿಲ್ದಾಣ - ತಂಡ-2: ಆರೋಗ್ಯ ಇಲಾಖೆಯ ಪರೀಕ್ಷಾ ತಂಡ
1. ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣ
2. ಯಶವಂತಪುರ ರೈಲ್ವೆ ನಿಲ್ದಾಣ
3. ಕೆಆರ್ಪುರಂ ರೈಲ್ವೆ ನಿಲ್ದಾಣ
ಪಾಸಿಟಿವ್ ಪ್ರಕರಣಗಳ ವರದಿ ಕಡ್ಡಾಯ: