ಬೆಂಗಳೂರು: ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿ, ಈ ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಶಾಲೆಯಿಂದ ಹೊರ ಹಾಕುತ್ತೇವೆ ಎಂದು ಆತನ ಸಹೋದರಿಯನ್ನು ಬೆದರಿಸಿದ್ದ ಘಟನೆಗೆ ಸಂಬಂಧಿಸಿದಂತೆ ಇಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ದಿಢೀರ್ ಭೇಟಿ ಕೊಟ್ಟು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಕೋರಮಂಗಲದ ಆಡುಗೋಡಿಯಲ್ಲಿರುವ ಖಾಸಗಿ ಶಾಲೆಗೆ ಭೇಟಿ ನೀಡಿದ ಸಚಿವರು, ಇಂತಹ ಘಟನೆ ಮರುಕಳಿಸಿದರೆ ಶಾಲೆಯ ಮಾನ್ಯತೆಯನ್ನೇ ರದ್ದುಪಡಿಸುವುದಾಗಿ ಎಚ್ಚರಿಸಿದರು.
ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭೇಟಿ ಘಟನೆ ಏನು?
ಶಿಕ್ಷಕಿಯೊಬ್ಬರು 7ನೇ ತರಗತಿ ವಿದ್ಯಾರ್ಥಿ ತಲೆಗೆ ಡಸ್ಟರ್ನಿಂದ ಹೊಡೆದು ಹಲ್ಲೆ ನಡೆಸಲಾಗಿತ್ತು. ಅದೇ ಶಾಲೆಯಲ್ಲಿ ಆತನ ಸಹೋದರಿಯೂ ಓದುತ್ತಿದ್ದಳು. ಇಬ್ಬರೂ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಶಾಲೆಯಿಂದ ಹೊರ ಹಾಕುವುದಾಗಿ ಶಾಲಾ ಆಡಳಿತ ವರ್ಗ ಅವರನ್ನು ಬೆದರಿಸಿತ್ತು. ಹೀಗಾಗಿ ಸಂಬಂಧ ಸಚಿವರು ಇಂದು ಶಾಲೆಗೆ ಭೇಟಿ ನೀಡಿದರು.
ಹಲ್ಲೆಗೊಳಗಾದ ವಿದ್ಯಾರ್ಥಿ ಸಹೋದರಿಯೊಂದಿಗೆ ಅಶ್ಲೀಲವಾಗಿ ಮಾತಾನಾಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಆ ಶಿಕ್ಷಕನನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕೆಂದು ಆಡಳಿತ ಮಂಡಳಿಗೆ ಸೂಚಿಸಿದರು. ಮತ್ತೆ ಇದೇ ರೀತಿ ಮುಂದುವರಿದರೆ ಶಾಲೆ ಮಾನ್ಯತೆ ರದ್ದುಪಡಿಸಲಾಗುವುದು ಎಂದು ಸೂಚಿಸಿದರು.