ಕರ್ನಾಟಕ

karnataka

ETV Bharat / city

ಸಾವಿರ ಮೀಟರ್ ಮೆಟ್ರೋ ಸುರಂಗ ಯಶಸ್ವಿಯಾಗಿ ಕೊರೆದ ಟಿಬಿಎಂ ವರದಾ, ರುದ್ರ

ಟಿಬಿಎಂ ವರದಾ 594 ಮೀಟರ್‌ಗಳ ಸುರಂಗವನ್ನು ಪೂರ್ಣಗೊಳಿಸಿ ಲ್ಯಾಂಗ್‌ಫೋರ್ಡ್ ನಿಲ್ದಾಣದಲ್ಲಿ ಇಂದು ಹೊರಬಂದಿದೆ. ದಕ್ಷಿಣ ಬೆಂಗಳೂರಿನ ರಾಂಪ್‌ನಿಂದ ರುದ್ರ ಹೆಸರಿನ ಟಿಬಿಎಂ ಸುರಂಗ ಕೊರೆಯುವುದನ್ನು ಆರಂಭಿಸಿ 614 ಮೀಟರ್ ಸುರಂಗ ಕೊರೆಯುವುದನ್ನು ಪೂರ್ಣಗೊಳಿಸಿ ಇಂದು ಡೈರಿ ವೃತ್ತ ನಿಲ್ದಾಣವನ್ನು ತಲುಪಿದೆ ಎಂದು ನಮ್ಮ ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

tbm-varada-and-rudra-successfully-carved-out-the-thousand-meter-metro-tunnel
ಟಿಬಿಎಂ ವರದಾ ಹಾಗು ರುದ್ರ

By

Published : Nov 11, 2021, 9:07 PM IST

ಬೆಂಗಳೂರು: ನಗರದ ರಾಷ್ಟ್ರೀಯ ಮಿಲಿಟರಿ ಶಾಲೆ ನಿಲ್ದಾಣದಿಂದ ಲ್ಯಾಂಗ್‌ಫೋರ್ಡ್ ನಿಲ್ದಾಣದವರೆಗೆ ಮತ್ತು ದಕ್ಷಿಣ ಬೆಂಗಳೂರಿನಿಂದ ಡೈರಿ ವೃತ್ತ ನಿಲ್ದಾಣದವರೆಗೆ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿರುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಮಾಹಿತಿ ನೀಡಿದೆ.


ಈ ವರ್ಷದ ಮಾರ್ಚ್ 12 ರಂದು ರಾಷ್ಟ್ರೀಯ ಮಿಲಿಟರಿ ಶಾಲೆ ನಿಲ್ದಾಣದಲ್ಲಿ ಸುರಂಗ ಕೊರೆಯಲು ಪ್ರಾರಂಭಿಸಿದ ಟಿಬಿಎಂ (ಟನಲ್ ಬೋರಿಂಗ್ ಯಂತ್ರ) ವರದಾ 594 ಮೀಟರ್‌ಗಳ ಸುರಂಗವನ್ನು ಪೂರ್ಣಗೊಳಿಸಿ ಲ್ಯಾಂಗ್‌ಫೋರ್ಡ್ ನಿಲ್ದಾಣದಲ್ಲಿ ಇಂದು (ಗುರುವಾರ) ಹೊರಬಂದಿದೆ.

ಈ ಮಾದರಿಯಲ್ಲೇ ದಕ್ಷಿಣ ಬೆಂಗಳೂರಿನ ರಾಂಪ್‌ನಿಂದ ರುದ್ರ ಹೆಸರಿನ ಟಿಬಿಎಂ ಸುರಂಗ ಕೊರೆಯುವುದನ್ನು ಆರಂಭಿಸಿ 614 ಮೀಟರ್ ಸುರಂಗ ಕೊರೆಯುವುದನ್ನು ಪೂರ್ಣಗೊಳಿಸಿ ಇಂದು ಡೈರಿ ವೃತ್ತ ನಿಲ್ದಾಣವನ್ನು ತಲುಪಿದೆ. ಆದರೆ ಟಿಬಿಎಂ ಯಂತ್ರವು ಡೈರಿ ವೃತ್ತ ನಿಲ್ದಾಣದಲ್ಲಿ ಕೊರೆಯುವಿಕೆಯನ್ನು ಮುಂದುವರೆಸಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details