ಬೆಂಗಳೂರು:ತಮಿಳುನಾಡು ಸಚಿವರೋರ್ವರ ಪುತ್ರಿ ಹಾಗೂ ಆಕೆಯ ಪತಿ ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ತಮಿಳುನಾಡು ಮುಜರಾಯಿ ಖಾತೆ ಸಚಿವ ಪಿ.ಶೇಖರ್ ಬಾಬು ಪುತ್ರಿ ಜಯಕಲ್ಯಾಣಿ ಮತ್ತು ಆಕೆಯ ಪತಿ ಸತೀಶ್ ಗೃಹ ಸಚಿವರನ್ನು ಭೇಟಿಯಾಗಿದ್ದಾರೆ.
ರಕ್ಷಣೆ ಕೋರಿ ಗೃಹ ಸಚಿವರ ಮೊರೆ ಹೋದ ತಮಿಳುನಾಡಿನ ಸಚಿವರ ಪುತ್ರಿ - tamilnadu minister p shekhar
ತಮಿಳುನಾಡು ಸಚಿವರೊಬ್ಬರ ಪುತ್ರಿ ಹಾಗೂ ಆಕೆಯ ಪತಿ ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ತಮಿಳುನಾಡು ಮುಜರಾಯಿ ಖಾತೆ ಸಚಿವ ಪಿ.ಶೇಖರ್ ಬಾಬು ಪುತ್ರಿ ಜಯಕಲ್ಯಾಣಿ ಮತ್ತು ಆಕೆಯ ಪತಿ ಸತೀಶ್ ಗೃಹ ಸಚಿವರನ್ನು ಭೇಟಿಯಾಗಿದ್ದಾರೆ. ಜೊತೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಲ್ಲಿಯೂ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
![ರಕ್ಷಣೆ ಕೋರಿ ಗೃಹ ಸಚಿವರ ಮೊರೆ ಹೋದ ತಮಿಳುನಾಡಿನ ಸಚಿವರ ಪುತ್ರಿ tamilnadu ministers daugther visited home araga jnanendra to ask protection](https://etvbharatimages.akamaized.net/etvbharat/prod-images/768-512-14687655-thumbnail-3x2-yy.jpg)
ರಕ್ಷಣೆ ಕೋರಿ ಗೃಹ ಸಚಿವರಿಗೆ ಮನವಿ ಮಾಡಿದ ತಮಿಳುನಾಡಿನ ಸಚಿವರ ಮಗಳು ಮತ್ತು ಅಳಿಯ
ಎಂಬಿಬಿಎಸ್ ಪದವೀಧರೆ ಜಯಕಲ್ಯಾಣಿಯವರು, ಈ ಹಿಂದೆ ಸತೀಶ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ನನಗೆ ಮತ್ತು ನನ್ನ ಪತಿಗೆ ಜೀವ ಬೆದರಿಕೆಯಿದ್ದು, ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಗೃಹ ಸಚಿವರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಸಚಿವರು ರಕ್ಷಣೆ ಒದಗಿಸುವುದಾಗಿ ಹೇಳಿದ್ದಾರೆ. ಇದಕ್ಕೂ ಮುನ್ನ ಈ ದಂಪತಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ಭೇಟಿಯಾಗಿ ರಕ್ಷಣೆ ಕೋರಿ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಓದಿ :ಪಂಚ ರಾಜ್ಯಗಳ ಚುನಾವಣೆ ರಿಸಲ್ಟ್: ಯಾರಿಗೆ ಯಾವ ರಾಜ್ಯದ ಗದ್ದುಗೆ? ಕಣದಲ್ಲಿರುವ ಪ್ರಮುಖರು ಇವರು!