ಕರ್ನಾಟಕ

karnataka

ETV Bharat / city

62 ಮಂದಿ ಪ್ರೊಬೇಷನರಿ ಗ್ರೇಡ್​​-2 ತಹಶೀಲ್ದಾರ್​ಗಳ ವರ್ಗಾವಣೆ - 62 ಮಂದಿ ಪ್ರೊಬೇಷನರಿ ಗ್ರೇಡ್​​-2 ತಹಶೀಲ್ದಾರ್​ಗಳ ವರ್ಗಾವಣೆ

ಪ್ರೊಬೇಷನರಿ ಅವಧಿಯಲ್ಲಿದ್ದ 62 ಮಂದಿ ಗ್ರೇಡ್​-2 ತಹಶೀಲ್ದಾರ್​ಗಳನ್ನ ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

Tahsildar officers transferred form state govt
Tahsildar officers transferred form state govt

By

Published : Feb 8, 2022, 2:04 AM IST

ಬೆಂಗಳೂರು: ಕಂದಾಯ ಇಲಾಖೆಯ ತರಬೇತಿಯಲ್ಲಿದ್ದ 62 ಪರೀಕ್ಷಾರ್ಥಿ ಗ್ರೇಡ್-2 ತಹಶೀಲ್ದಾರ್​ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಸ್ಥಳಕ್ಕೆ ವರ್ಗಾಯಿಸಿ/ ಸ್ಥಳನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

62 ಮಂದಿ ಪ್ರೊಬೇಷನರಿ ಗ್ರೇಡ್​​-2 ತಹಶೀಲ್ದಾರ್​ಗಳ ವರ್ಗಾವಣೆ

ವರ್ಗಾವಣೆಗೊಂಡಿರುವ ಅಧಿಕಾರಿಗಳಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿಯುಕ್ತಿಗೊಂಡಿರುವ ವಿವರ: ಅಶ್ವತ್ಥ್​ ಮಲ್ಲೇನಹಳ್ಳಿ ಬಸವಲಿಂಗಪ್ಪ: ಬೆಂಗಳೂರು ಜಲಮಂಡಳಿ, ಅಮೃತ್ HR ಅತ್ರೇಶ್​: ಡಿ. ದೇವರಾಜ ಅರಸ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ದೀಪ್ತಿ ಎನ್​; ಮುಜರಾಯಿ ತಹಶೀಲ್ದಾರ್​, ಬೆಂಗಳೂರು ನಗರ, ಲೋಕೇಶ್​​ ಕೆ.ಎನ್​: ರೇರಾ ಬೆಂಗಳೂರು, ಬಿಎಂ ಸಂಜನಾ: ನಗರ ಆಸ್ತಿ ಹಕ್ಕುಗಳ ದಾಖಲೆ ವಿಭಾಗ

ABOUT THE AUTHOR

...view details