ಕರ್ನಾಟಕ

karnataka

ETV Bharat / city

ರಂಜಾನ್​ ಪ್ರಯುಕ್ತ ವಿವಿಧ ಆಹಾರ ನೀಡುವಂತೆ ಪೊಲೀಸರಿಗೆ ತಬ್ಲಿಘಿಗಳ ಡಿಮ್ಯಾಂಡ್​ - variety of food during Ramadan

ದೆಹಲಿಯ ತಬ್ಲಿಘಿ ಜಮಾತ್​ಗೆ ತೆರಳಿದ್ದ ಬೆಂಗಳೂರಿನ 276 ಮಂದಿಯನ್ನ ಹಜ್ ಭವನಗಳಲ್ಲಿ‌ ಕ್ವಾರಂಟೈನ್ ಮಾಡಲಾಗಿದ್ದು, ಸದ್ಯ ಅವರು ರಂಜಾನ್​ ಪ್ರಯುಕ್ತ ವಿವಿಧ ಆಹಾರ ನೀಡುವಂತೆ ಪೊಲೀಸರಿಗೆ ಕಿರಿಕ್​ ಮಾಡುತ್ತಿದ್ದು,ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

Tablighi's trubling to give police a variety of food during Ramadan
ರಂಜಾನ್​ ಪ್ರಯುಕ್ತ ವಿವಿಧ ಆಹಾರ ನೀಡುವಂತೆ ಪೊಲೀಸರಿಗೆ ತಬ್ಲಿಘಿಗಳ ಕಿರಿಕ್​..!

By

Published : Apr 29, 2020, 2:31 PM IST

ಬೆಂಗಳೂರು:ದೆಹಲಿಯ ತಬ್ಲಿಘಿ ಜಮಾತ್​ಗೆ ತೆರಳಿದ್ದ ಸಿಲಿಕಾನ್ ಸಿಟಿಯ 276 ಮಂದಿ ರಂಜಾನ್ ಮಾಸದ ಉಪವಾಸವನ್ನ ಆಚರಿಸುತ್ತಿದ್ದು, ರಂಜಾನ್​ ಪ್ರಯುಕ್ತ ವಿವಿಧ ಆಹಾರಗಳಿಗಾಗಿ ಪೊಲೀಸರ ಮುಂದೆ ಬೇಡಿಕೆ ಇಡುತ್ತಿದ್ದಾರೆ.

ದೆಹಲಿಯ ನಿಜಾಮುದ್ದೀನ್‍ನ ಮರ್ಕಜ್ ಮಸೀದಿಯಲ್ಲಿ ತಬ್ಲಿಘಿ ಜಮಾತ್ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕರ್ನಾಟಕದಿಂದ 1,300 ಜನ ತೆರಳಿದ್ದರು. ಅದರಲ್ಲಿ ಸಿಲಿಕಾನ್ ಸಿಟಿಯಿಂದ‌ ಸುಮಾರು ‌276 ಮಂದಿ ತೆರಳಿದ್ದರು. ನಗರ ಪೊಲೀಸರು ವಿಶೆಷ ತಂಡ, ಜಮಾತ್​ಗೆ ತೆರಳಿದ್ದ ಆ 276 ಮಂದಿಯನ್ನ ಪತ್ತೆ ಮಾಡಿ, ಹಜ್ ಭವನಗಳಲ್ಲಿ‌ ಕ್ವಾರಂಟೈನ್ ಮಾಡಿದ್ದರು. ಸದ್ಯ ಕ್ವಾರಂಟೈನ್ ಮಾಡಿರುವವರ ಭದ್ರತೆಯನ್ನ ಪ್ರತಿ ಠಾಣೆಯ ಸಬ್ ಇನ್ಸ್ಪೆಕ್ಟರ್​ಗಳು ಜವಾಬ್ದಾರಿಯನ್ನ ತೆಗೆದುಕೊಂಡಿದ್ದು, ಪ್ರತಿ ದಿನ ಪರಿಶೀಲನೆ ನಡೆಸಿ ಅವರಿಗೆ ಊಟವನ್ನ ಸರ್ಕಾರ ಕಡೆಯಿಂದ ನೀಡ್ತಿದ್ದಾರೆ. ಹಾಗೆಯೇ ಅವರಿಗೆ ಆರೋಗ್ಯ ತಪಾಸಣೆ ಕೂಡ ನಡೆಸಲಾಗ್ತಿದೆ.

ಸದ್ಯ ಹಜ್ ಭವನದಲ್ಲಿರುವ ಪ್ರತಿ ತಬ್ಲಿಘಿಗಳು ರಂಜಾನ್ ಮಾಸದ ಉಪವಾಸವನ್ನ ಆಚರಿಸುತ್ತಿದ್ದಾರೆ. ಹಾಗೆಯೇ ಸಂಜೆ ಹಾಗೂ ಮುಂಜಾನೆ ಉಪವಾಸ ಬಿಡುವ ಹೊತ್ತಿಗೆ ಬೇಕಾದ ನಾನಾ ಬಗೆಯ ಹಣ್ಣು ಹಂಪಲು, ಖಾದ್ಯ ತಿಂಡಿಳು ಬೇಕೆ ಬೇಕು ಎಂದು ಸಬ್ ಇನ್ಸ್ಪೆಕ್ಟರ್​ಗಳಿಗೆ ಕಿರಿಕ್​ ಮಾಡುತ್ತಿದ್ದಾರೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು, ಈ ವಿಚಾರವನ್ನ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ABOUT THE AUTHOR

...view details