ಕರ್ನಾಟಕ

karnataka

ETV Bharat / city

ಹಿಂದುಳಿದ ಜಾತಿ, ದಲಿತ ಮಠಗಳ ಶ್ರೀಗಳ ಒಕ್ಕೂಟದಿಂದ ಸಚಿವ ಈಶ್ವರಪ್ಪ ಭೇಟಿ

ದೇವಲೋಕದಂತೆ ಎಲ್ಲ ಸ್ವಾಮೀಜಿಗಳು ನಮ್ಮ ಮನೆಗೆ ಬಂದಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ. ಸರ್ಕಾರ ಮಾಡುವ ಕೆಲಸಗಳನ್ನು ಮಠಗಳು ಮತ್ತು ಸ್ವಾಮೀಜಿಗಳು ನಡೆಸಿಕೊಂಡು ಹೋಗುತ್ತಿದ್ದಾರೆ. ಮಠಗಳ ಮೂಲಕ ಶೈಕ್ಷಣಿಕ, ಸಾಮಾಜಿಕ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಸರ್ಕಾರದಿಂದ ಬರುವ ಎಲ್ಲ ಸವಲತ್ತುಗಳನ್ನು ನೀಡುತ್ತಿದ್ದೇವೆ. ಇನ್ನೂ ಅವರ ಅಹವಾಲುಗಳು ಇದ್ದರೆ ಅವುಗಳನ್ನು ಕೂಡ ಬಗೆಹರಿಸುತ್ತೇವೆ. ಅವಶ್ಯಕತೆ ಬಿದ್ದರೆ ಮುಖ್ಯಮಂತ್ರಿಗಳನ್ನೂ ಅವರೊಂದಿಗೆ ಭೇಟಿ ಮಾಡಿ ಅವರ ಎಲ್ಲ ಕಾರ್ಯಗಳಿಗೆ ಸಹಕಾರ ನೀಡುತ್ತೇವೆ..

ಶ್ರೀಗಳ ಒಕ್ಕೂಟದಿಂದ ಸಚಿವ ಈಶ್ವರಪ್ಪ ಭೇಟಿ
ಶ್ರೀಗಳ ಒಕ್ಕೂಟದಿಂದ ಸಚಿವ ಈಶ್ವರಪ್ಪ ಭೇಟಿ

By

Published : Oct 23, 2021, 9:00 PM IST

ಬೆಂಗಳೂರು : ಮುಖ್ಯಮಂತ್ರಿಗಳೊಂದಿಗೆ ಮಠಾಧೀಶರನ್ನು ಭೇಟಿ ಮಾಡಿಸಿ ಹಿಂದುಳಿದ ಜಾತಿ ಮತ್ತು ದಲಿತ ಮಠಗಳ ಎಲ್ಲ ಕಾರ್ಯಗಳಿಗೆ ಸಹಕಾರ ನೀಡಲಾಗುತ್ತದೆ. ಮಠಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಗೃಹ ಕಚೇರಿಗೆ ಹಿಂದುಳಿದ ಜಾತಿಗಳ ಮಠಾಧೀಶರ ಒಕ್ಕೂಟ ಭೇಟಿ ನೀಡಿತು. ಒಕ್ಕೂಟದ ಅಧ್ಯಕ್ಷ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಮ್ಮುಖದಲ್ಲಿ ಮಾದಾರ ಚೆನ್ನಯ್ಯ ಶ್ರೀಗಳು, ಬಸವ ಮಾಚಿದೇವ ಮಹಾಸ್ವಾಮಿಗಳು, ಭಗೀರಥ ಪೀಠದ ಪುರುಷೋತ್ತಮಾನಂದ ಮಹಾಸ್ವಾಮಿಗಳು, ಶ್ರೀ ಶ್ರೀ ಹಡಪದ ಅಪ್ಪಣ್ಣ ಮಹಾಸ್ವಾಮಿಗಳು ಸೇರಿದಂತೆ ಇನ್ನೂ ಹಲವಾರು ಮಹಾಸ್ವಾಮೀಜಿಗಳು ಭೇಟಿ ಮಾಡಿ, ತಮ್ಮ ಮಠ- ಮಾನ್ಯಗಳಿಗೆ ಸರ್ಕಾರದಿಂದ ಆಗಬೇಕಾಗಿರುವ ಹಲವಾರು ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.

ಸಚಿವ ಈಶ್ವರಪ್ಪ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಈ ವೇಳೆ ಮಾತನಾಡಿದ ಕನಕಗುರುಪೀಠದ ಶ್ರೀಗಳು, ಈ ಹಿಂದೆಯೇ ಹಲವಾರು ಬಾರಿ ನಾವೆಲ್ಲ ಒಂದು ಕಡೆ ಸೇರಲು ನಿಶ್ಚಯಸಿದ್ದೆವು. ಆದರೆ. ಇಂದು ಆ ಕಾಲ ಕೂಡಿ ಬಂದಿದೆ. ನಮ್ಮ ಹಿಂದುಳಿದ ದಲಿತ ಮಠಗಳ ಒಕ್ಕೂಟದಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ.

ಸೂರಿಲ್ಲದ ಮಠಮಾನ್ಯಗಳಿಗೆ ಸಚಿವ ಕೆ.ಎಸ್.ಈಶ್ವರಪ್ಪ ಈ ಹಿಂದೆ ಸದಾನಂದಗೌಡರು ಮುಖ್ಯಮಂತ್ರಿಗಳಿದ್ದಾಗ ನಾರಾಯಣಸ್ವಾಮಿಗಳು ಸಮಾಜ ಕಲ್ಯಾಣ ಸಚಿವರಾಗಿದ್ದ ವೇಳೆ ಸಾಕಷ್ಟು ಹಿಂದುಳಿದ, ದಲಿತ ಮಠಗಳಿಗೆ ಸೂರು ಕಲ್ಪಿಸಿಕೊಟ್ಟಿದ್ದಾರೆ. ಗ್ರಾಮೀಣ ಭಾಗದಲ್ಲಿ ಜಾತಿ ವೈಷಮ್ಯ ಹೆಚ್ಚಾಗುತ್ತಿದೆ. ಜಾತಿ ಸಂಘರ್ಷ ತಡೆಯುವುದು ಒಕ್ಕೂಟದ ಮೂಲ ಉದ್ದೇಶ ಎಂದು ತಿಳಿಸಿದರು.

ನಂತರ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ದೇವಲೋಕದಂತೆ ಎಲ್ಲ ಸ್ವಾಮೀಜಿಗಳು ನಮ್ಮ ಮನೆಗೆ ಬಂದಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ. ಸರ್ಕಾರ ಮಾಡುವ ಕೆಲಸಗಳನ್ನು ಮಠಗಳು ಮತ್ತು ಸ್ವಾಮೀಜಿಗಳು ನಡೆಸಿಕೊಂಡು ಹೋಗುತ್ತಿದ್ದಾರೆ. ಮಠಗಳ ಮೂಲಕ ಶೈಕ್ಷಣಿಕ, ಸಾಮಾಜಿಕ ಸೇವೆ ಮಾಡುತ್ತಿರುವುದು ಶ್ಲಾಘನೀಯ.

ಸರ್ಕಾರದಿಂದ ಬರುವ ಎಲ್ಲ ಸವಲತ್ತುಗಳನ್ನು ನೀಡುತ್ತಿದ್ದೇವೆ. ಇನ್ನೂ ಅವರ ಅಹವಾಲುಗಳು ಇದ್ದರೆ ಅವುಗಳನ್ನು ಕೂಡ ಬಗೆಹರಿಸುತ್ತೇವೆ. ಅವಶ್ಯಕತೆ ಬಿದ್ದರೆ ಮುಖ್ಯಮಂತ್ರಿಗಳನ್ನೂ ಅವರೊಂದಿಗೆ ಭೇಟಿ ಮಾಡಿ ಅವರ ಎಲ್ಲ ಕಾರ್ಯಗಳಿಗೆ ಸಹಕಾರ ನೀಡುತ್ತೇವೆ ಎಂದರು.

ಹಿಂದುಳಿದ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಇಂದು ನಮ್ಮನ್ನು ಮತ್ತು ನಮ್ಮ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪರವರನ್ನು ಹಿಂದುಳಿದ ಮತ್ತು ದಲಿತ ಮಠಾಧೀಶರುಗಳು ಭೇಟಿ ಮಾಡಿ ವಿವಿಧ ಕೆಲಸಗಳ ಕುರಿತು ನಮ್ಮ ಗಮನಕ್ಕೆ ತಂದಿದ್ದಾರೆ. ಮಠಗಳಿಗೆ ಅತ್ಯಗತ್ಯ ಸೌಕರ್ಯಗಳನ್ನು ನೀಡುವ ಕುರಿತು ಕೂಡ ಚರ್ಚಿಸಿದ್ದಾರೆ. ಅವರ ಅಹವಾಲು ಕೇಳಿದ್ದೇವೆ. ಮಠಗಳಿಗೆ ಅವಶ್ಯವಿರುವ ಸೌಕರ್ಯ ನೀಡಲಾಗುತ್ತದೆ. ಹೆಚ್ಚಿನ ಅನುದಾನ ನೀಡಿ, ಅಭಿವೃದ್ಧಿ ಮಾಡಲಾಗುತ್ತದೆ. ಸಿಎಂ ಬಸವರಾಜ ಬೊಮ್ಮಾಯಿಯವರನ್ನೂ ಭೇಟಿ ಮಾಡಲಾಗುವುದು. ಮಠಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details