ಬೆಂಗಳೂರು:ರಾಮಮೂರ್ತಿ ನಗರದ ಕಲ್ಕೆರೆಯಲ್ಲಿ ನೈಜೀರಿಯಾ ಮೂಲದ ಪ್ರಜೆಯ ಶವ ಪತ್ತೆಯಾಗಿದೆ.
ನೈಜೀರಿಯಾ ಮೂಲದ ಪೀಟರ್ ಸಾವನ್ನಪ್ಪಿದ ವ್ಯಕ್ತಿ. ರಾಮಮೂರ್ತಿ ನಗರದ ಬಂಜಾರ ಲೇಔಟ್ನಲ್ಲಿ ವಾಸವಾಗಿದ್ದ ಎಂದು ತಿಳಿದು ಬಂದಿದೆ. ಕೆರೆಯಲ್ಲಿ ಶವ ಬಿದ್ದಿರುವುದನ್ನು ಕಂಡು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ತಂಡ ಕಾರ್ಯಾಚರಣೆ ನಡೆಸಿ ಶವ ಹೊರ ತೆಗೆದಿದ್ದು, ಸದ್ಯ ರಾಮಮೂರ್ತಿನಗರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದಕ ವಸ್ತು ಜಾಲದಲ್ಲಿ ತೊಡಗಿಸಿಕೊಂಡಿದ್ದ ಈತನನ್ನು ಬಂಧಿಸಲು ಪೊಲೀಸರು ಮುಂದಾದಾಗ ತಪ್ಪಿಸಿಕೊಳ್ಳುವ ಭರದಲ್ಲಿ ಕೆರೆಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ ಎಂದು ಮೃತನ ಸ್ನೇಹಿತರು ಆರೋಪಿಸಿದ್ದಾರೆ. ಮೃತನ ಹೆಸರು, ಮನೆ ವಿಳಾಸ ಹೊರತುಪಡಿಸಿದರೆ ಉಳಿದ ಮಾಹಿತಿ ಲಭ್ಯವಾಗಿಲ್ಲ. ಸುಮಾರು ವರ್ಷದಿಂದ ಭಾರತದಲ್ಲಿ ನೆಲೆಸಿದ್ದ ಈತನ ವೀಸಾ ಅವಧಿ ಬಗ್ಗೆ ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಮದ್ಯ ಸೇವಿಸಿ ವಾಹನ ಚಾಲನೆ : ಬೈಕ್ ಸವಾರನ ಮೇಲೆ ಹರಿದ ಟ್ರ್ಯಾಕ್ಟರ್