ಕರ್ನಾಟಕ

karnataka

ETV Bharat / city

ಬಂಧಿತ ಸುಶೀಲ್ ಮಂತ್ರಿಗೆ ಸಂಬಂಧಿಸಿದ 10 ಸ್ಥಳಗಳಲ್ಲಿ ಇಡಿ ದಾಳಿ - about real estate sushil panduranga case

ಕೋರ್ಟಿನಿಂದ ಅನುಮತಿ ಪಡೆದು ಇಂದು ಬೆಳಗ್ಗೆ ಹೆಚ್ಚಿನ ಸಾಕ್ಷಿ ಕಲೆಹಾಕಲು ಮಂತ್ರಿ ಅವರಿಗೆ ಸಂಬಂಧಿಸಿದ ಕಚೇರಿ ಸೇರಿದಂತೆ 10 ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

sushil pandurang
ಸುಶೀಲ್ ಪಾಂಡುರಂಗ ಮಂತ್ರಿಗೆ ಸಂಬಂಧಿಸಿದ 10 ಕಡೆಗಳಲ್ಲಿ ಇಡಿ ದಾಳಿ

By

Published : Jun 27, 2022, 1:37 PM IST

ಬೆಂಗಳೂರು: ಅಕ್ರಮ‌ ಹಣ ವರ್ಗಾವಣೆ ಆರೋಪ ಸಂಬಂಧ ರಿಯಲ್‌ ಎಸ್ಟೇಟ್ ಉದ್ಯಮಿ ಸುಶೀಲ್‌ ಪಾಂಡುರಂಗ ಮಂತ್ರಿಯನ್ನು ಜಾರಿ ನಿದೇರ್ಶನಾಲಯ ಅಧಿಕಾರಿಗಳು ಬಂಧಿಸಿ 10 ದಿನಗಳ ಕಾಲ‌ ತಮ್ಮ ವಶಕ್ಕೆ ಪಡಿದಿದ್ದಾರೆ.

ಈ ನಡುವೆ ಸುಶೀಲ್ ಪಾಂಡುರಂಗ ಬಂಧನದ ಬಳಿಕ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಗೆ ಅನುಮತಿ ಪಡೆದುಕೊಂಡು ಇಂದು ಬೆಳಗ್ಗೆ ಅವರಿಗೆ ನಿವೇಶನ, ಫ್ಲ್ಯಾಟ್​, ವಿಠ್ಡಲ್ ಮಲ್ಯ ರಸ್ತೆಯಲ್ಲಿರುವ ಕಚೇರಿ ಸೇರಿದಂತೆ 10 ಕಡೆ ಇಡಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.

ಸುಶೀಲ್ ಮೇಲಿರುವ ಆರೋಪಗಳ ಸಂಬಂಧ ಸಾಕ್ಷಿ ಕಲೆ ಹಾಕುವ ನಿಟ್ಟಿನಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ:ದುರಸ್ತಿ ಕಾರ್ಯ: ಸಿಲಿಕಾನ್ ಸಿಟಿಯ ಹಲವೆಡೆ ಮೂರು ದಿನ ಪವರ್ ಕಟ್!

ABOUT THE AUTHOR

...view details