ಕರ್ನಾಟಕ

karnataka

ETV Bharat / city

ತುಳಸಿ ಮುನಿರಾಜು ಅರ್ಜಿ ವಜಾಗೊಳಿಸಿದ ಸುಪ್ರೀಂ: ಮುನಿರತ್ನಗೆ ಬಿಜೆಪಿಯಿಂದ ಟಿಕೆಟ್​?

ಟಿಕೆಟ್ ಘೋಷಣೆಯಲ್ಲಿ ವಿಳಂಬವಾದ ಹಿನ್ನಲೆಯಲ್ಲಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮುಂದೂಡುವಂತೆ ಕೋರಿ ಬಿಜೆಪಿ ಟಿಕೆಟ್​ ಆಕಾಂಕ್ಷಿ ತುಳಸಿ ಮುನಿರಾಜು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದೆ.

Supreme court rejects Tulasi Muniraju's plea
ಮುನಿರಾಜು ಹಾಗೂ ಮುನಿರತ್ನ

By

Published : Oct 13, 2020, 12:54 PM IST

ಬೆಂಗಳೂರು:ರಾಜರಾಜೇಶ್ವರಿ ಉಪಚುನಾವಣೆ ಮುಂದೂಡುವಂತೆ ಕೋರಿ ಬಿಜೆಪಿ ಟಿಕೆಟ್​ ಆಕಾಂಕ್ಷಿ ತುಳಸಿ ಮುನಿರಾಜು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿ ಆದೇಶ ನೀಡಿದೆ.

ಆರ್​.ಆರ್​.ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಗಳಾದ ತುಳಸಿ ಮುನಿರಾಜು ಹಾಗೂ ಮುನಿರತ್ನ ಇವರಿಬ್ಬರಲ್ಲಿ ಬಿಜೆಪಿ ಯಾರಿಗೆ ಟಿಕೆಟ್​ ನೀಡಲಿದೆ ಎಂಬುದೇ ಗೊಂದಲದ ವಿಚಾರವಾಗಿತ್ತು. ಮುನಿರತ್ನ ಪರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹಲವು ಸಚಿವರು ಇದ್ದರೆ, ಮುನಿರಾಜು ಪರ ಆರ್​​ಎಸ್ಎಸ್ ಹಿರಿಯ ಮುಖಂಡರು ಲಾಬಿ ನಡೆಸುತ್ತಿದ್ದಾರೆ.

ಹೀಗಾಗಿ ಟಿಕೆಟ್ ಘೋಷಣೆಯಲ್ಲಿ ವಿಳಂಬವಾಗುತ್ತಿದ್ದು ತುಳಸಿ ಮುನಿರಾಜು ಉಪಚುನಾವಣೆ ಮುಂದೂಡುವಂತೆ ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ. ಹೀಗಾಗಿ, ನಿಗದಿಯಂತೆ ನವೆಂಬರ್​ 3 ರಂದು ಆರ್​.ಆರ್​.ನಗರ ಬೈ-ಎಲೆಕ್ಷನ್​ ನಡೆಯಲಿದೆ.

ಕೋರ್ಟ್​ ಆದೇಶದಿಂದಾಗಿ ಮುನಿರತ್ನ ನಿಟ್ಟುಸಿರು ಬಿಟ್ಟಿದ್ದು, ಇವರಿಗೇ ಬಿಜೆಪಿ ಟಿಕೆಟ್‌ ನೀಡುವ ಸಾಧ್ಯತೆಯಿದೆ.

ABOUT THE AUTHOR

...view details