ಕರ್ನಾಟಕ

karnataka

By

Published : Jul 4, 2020, 7:37 PM IST

ETV Bharat / city

ಹುಟ್ಟಿದ ಊರಿಗೆ ವಾಪಸ್‌ ಹೊಂಟ್‌ಮ್ಯಾಲೆ, ಬಸ್‌ ಹಿಡಿ.. ಸೀದಾ ನಡಿ..

ವ್ಯಾಪಕವಾಗಿರುವ ಕೊರೊನಾ ವ್ಯಾಧಿ ತಕಮಟ್ಟಿಗಾದರೂ ನಿಯಂತ್ರಿಸಲು ರಾಜ್ಯ ಸರ್ಕಾರ ಪ್ರತಿ ಭಾನುವಾರ ಲಾಕ್ ಡೌನ್ ಆದೇಶ ಹಿನ್ನೆಲೆಯಲ್ಲಿ ನಗರದಲ್ಲಿ ಏಕಾಏಕಿ ಜನರು ಪ್ರಯಾಣ ಬೆಳೆಸಿದ್ದರಿಂದ ರಾಜಧಾನಿಯಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು..

sunday-lock-down-effect-in-bangalore
ಭಾನುವಾರದ ಲಾಕ್​ಡೌನ್​​

ಬೆಂಗಳೂರು:‌ ಭಾನುವಾರದ ಲಾಕ್​ಡೌನ್ ಹಿನ್ನೆಲೆ ನಗರದಲ್ಲಿ ಏಕಾಏಕಿ ಜನ ಪ್ರಯಾಣ ಬೆಳೆಸಿದ್ದರಿಂದ ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿದೆ.

ಇಂದು ರಾತ್ರಿ 8 ಗಂಟೆಯಿಂದ ಕರ್ಫ್ಯೂ ಜಾರಿಯಾಗುತ್ತಿದ್ದಂತೆ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಅಗತ್ಯ ವಸ್ತುಗಳ ಪೂರೈಕೆ ಹಾಗೂ ಮಾರಾಟ ಹೊರತುಪಡಿಸಿ ಯಾವುದೇ ಚಟುವಟಿಕೆ ನಡೆಯಲು ಅವಕಾಶವಿಲ್ಲ. ಈ ಮೂಲಕ ನಗರ ಸ್ತಬ್ಧವಾಗಿರಲಿದೆ.

ಭಾನುವಾರದ ಲಾಕ್​ಡೌನ್ ಹಿನ್ನೆಲೆ ವಾಪಸ್‌ ಊರಿಗೆ ತೆರಳಲು ಜನಜಾತ್ರೆ..

‌ಇದರಿಂದಾಗಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರೋಡ್, ಮೈಸೂರು, ಬಳ್ಳಾರಿ ರಸ್ತೆ, ಹೊಸೂರು ಹಾಗೂ ಹಳೆ ಮದ್ರಾಸ್ ರಸ್ತೆಗಳಲ್ಲಿ‌ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ಸಹಜವಾಗಿ ವಾಹನ ಸಂಚಾರ ಅಧಿಕವಾಗಿತ್ತು. ಪ್ರಮುಖ ಬಸ್ ನಿಲ್ದಾಣ ಹೊರತುಪಡಿಸಿ ಬೇರೆ ‌ಬಸ್ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸದ ಪರಿಣಾಮ ರಸ್ತೆಯಲ್ಲೇ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು.

ಇನ್ನೂ ಕೆಲ ಪ್ರಯಾಣಿಕರು ಊರಿಗೆ ಹೋಗಲು ಸ್ವಂತ ವಾಹನ ವ್ಯವಸ್ಥೆ ಮಾಡಿಕೊಂಡರೆ, ಕೆಲವರು ಕ್ಯಾಬ್, ಟ್ಯಾಕ್ಸಿ ಸೇರಿ ಊರಿಗೆ ಹೋಗುವ ವಾಹನಗಳನ್ನು ಹತ್ತುವ ದೃಶ್ಯ ಕಂಡು ಬಂತು. ಬಹುತೇಕ ದಿನಗೂಲಿ ಕಾರ್ಮಿಕರು ತಮ್ಮ ತಮ್ಮ ಗೂಡುಗಳಿಗೆ ಸೇರಿಕೊಂಡ್ರೆ ಸಾಕು ಅಂತಾ ಬಸ್​ ಬರುವಿಕೆಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂತು.

ಬಾಡಿಕೆ ಕಟ್ಟೋಕೆ ಆಗ್ತಿಲ್ಲ. ಮಕ್ಕಳಿಗೆ ಸ್ಕೂಲ್ ಕೂಡ ಇಲ್ಲ. ಹೇಗೂ ಊರಲ್ಲಿ ಜಮೀನಿದೆ. ಮಳೆ ಆಗ್ತಿದೆ, ಕೃಷಿ ಮಾಡ್ತಾ ಜೀವನ ಸಾಗಿಸ್ತೀವಿ. ಈ ಬೆಂಗಳೂರು ಸಹವಾಸವೇ ಬೇಡ. ಎಲ್ಲಾ ಸರಿ ಆದ್ಮೇಲೆ ಬರಬೇಕಾ, ಬೇಡ್ವಾ ಅಂತಾ ನೋಡೋಣ. ಸದ್ಯಕ್ಕೆ ಜೀವ ಉಳಿದ್ರೆ ಸಾಕು ಅಂತಾ ಬಸ್‌ಗಾಗಿ ಕಾದು ಕುಳಿತಿದ್ದ ಕಲಬುರ್ಗಿ ಮೂಲದ ಪ್ರಯಾಣಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ABOUT THE AUTHOR

...view details