ಕರ್ನಾಟಕ

karnataka

ETV Bharat / city

ಬಹಿರಂಗವಾದ ಗೌಪ್ಯ ಮತದಾನ... ಯೋಧನ ಮತಪತ್ರ ವೈರಲ್​ - 2019

ಪ್ರತಿಷ್ಠಿತ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಹಿರಂಗವಾದ ಅಂಚೆ ಮತಪತ್ರ- ಸೇವಾನಿರತ ಸಿಆರ್​ಪಿಎಫ್ ಯೋಧನ ಮತ ವೈರಲ್​- ಪಕ್ಷೇತರ ಅಭ್ಯರ್ಥಿ ಸುಮಲತಾಗೆ ವೋಟ್​ ಹಾಕಿದ್ದಾಗ ಘೋಷಣೆ - ಅಭ್ಯರ್ಥಿ ಸುಮಲತಾರಿಂದ ಧನ್ಯವಾದ- ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ

ಸುಮಲತಾಗೆ ಮೊದಲ ಮತ

By

Published : Apr 7, 2019, 3:16 AM IST

Updated : Apr 7, 2019, 4:54 PM IST

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ಗೆ ಮೊದಲ ಸಿಹಿ ಸಿಕ್ಕಿದೆ. ಯುಗಾದಿ ದಿನವೇ ಸೇವಾ ಮತದಾರರೊಬ್ಬರು ಸುಮಲತಾಗೆ ಮತ ಹಾಕುವ ಮೂಲಕ ಶುಭ ಕೋರಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಆರ್‌ಪಿಎಫ್ ಯೋಧನ ಮತಪತ್ರವನ್ನು ಸುಮಲತಾ ಅಂಬರೀಶ್​ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಟ್ಯಾಗ್ ಮಾಡಿ, ಯೋಧನಿಗೆ ಧನ್ಯವಾದ ಅರ್ಪಿಸಿದ್ದಾರೆ.

ಶನಿವಾರ ಯೋಧರಿಗಾಗಿ ನಡೆದ ವಿಶೇಷ ಮತದಾನದ ವೇಳೆ ಮಂಡ್ಯ ಜಿಲ್ಲೆಯ ಸಿಆರ್​ಪಿಎಫ್​ ಯೋಧ ಆರ್. ನಾಯಕ್ ಅಂಚೆ ಮತದಾನ ಮಾಡಿ ಸುಮಲತಾಗೆ ಶುಭ ಕೋರಿದ್ದಾರೆ.

ಸುಮಲತಾಗೆ ನಾನು ವೋಟ್ ಮಾಡಿದ್ದೇನೆ, ಒಳ್ಳೆಯ ಲೀಡಿಂಗ್​ನಿಂದ ಗೆಲ್ತಾರೆ. ಸುಮಲತಾರನ್ನು ಗೆಲ್ಲಿಸುವ ಮೂಲಕ ಮಂಡ್ಯದವರ ಸ್ವಾಭಿಮಾನ ತೋರಿಸಿ ಎಂದು ಯೋಧನ‌ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದಾರೆ.

ಯೋಧ ತನಗೆ ಮತದಾನ‌ದ ಮಾಡಿರೋ ಪೋಸ್ಟ್ ಗಮನಿಸಿ, ಅದನ್ನು ರೆಬಲ್ ಸ್ಟಾರ್ ಪತ್ನಿ ಶೇರ್ ಮಾಡಿ ಧನ್ಯವಾದ ಅರ್ಪಿಸಿದ್ದಾರೆ. ನಿಮ್ಮ ಈ ಅಭಿಮಾನಕ್ಕೆ ಧಕ್ಕೆಯಾಗದ ರೀತಿ ಮಂಡ್ಯವನ್ನು ಬದಲಾವಣೆ ಮಾಡಿ ತೋರಿಸುವುದಾಗಿ ಸುಮಲತಾ ಭರವಸೆ ನೀಡಿದ್ದಾರೆ.

Last Updated : Apr 7, 2019, 4:54 PM IST

ABOUT THE AUTHOR

...view details