ಬೆಂಗಳೂರು: ಬೆಂಗಳೂರಿನಲ್ಲಿ ವೃದ್ಧೆಯ ತಲೆ ಒಡೆದು ಚಿನ್ನದ ಸರ ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿ ಭದ್ರಾವತಿಯಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಆರೋಪಿಯನ್ನು ರಾಜೇಂದ್ರ ಎಂದು ಗುರುತಿಸಲಾಗಿದೆ. ಐಪಿಎಲ್ ಬೆಟ್ಟಿಂಗ್, ಜೂಜಾಟ ಮುಂತಾದವುಗಳಲ್ಲಿ ತೊಡಗಿದ್ದ ಆರೋಪಿ ರಾಜೇಂದ್ರ ಕೋಟಿ ಕೋಟಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಹೆಂಡತಿ ಒಡವೆಗಳನ್ನು ಅಡವಿಟ್ಟಿದ್ದ ಎಂದು ತಿಳಿದುಬಂದಿದೆ.
ಒಂದು ಕಡೆ ಸಾಲಗಾರರ ಕಾಟ ಇನ್ನೊಂದೆಡೆ ಒಡವೆ ಬಿಡಿಸಿ ಕೊಡಿ ಎಂದು ಹೆಂಡತಿ ಒತ್ತಾಯ ಮಾಡುತ್ತಿದ್ದರಿಂದ ಬೇಸತ್ತಿದ್ದ ರಾಜೇಂದ್ರ ಏಪ್ರಿಲ್ 20ರಂದು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ವಿದ್ಯಮಾನ ನಗರದಲ್ಲಿ ಬಾಡಿಗೆ ಕೇಳು ನೆಪದಲ್ಲಿ ಒಂಟಿ ವೃದ್ಧೆಗೆ ಹಲ್ಲೆ ನಡೆಸಿದ್ದ. ಬಳಿಕ ಸ್ಪಾನರ್‌ನಿಂದ ಆಕೆಯ ತಲೆಗೆ ಹೊಡೆದು 48ಗ್ರಾಂ ಚಿನ್ನದ ಸರ ದರೋಡೆ ಮಾಡಿ ಪರಾರಿಯಾಗಿದ್ದ.