ಕರ್ನಾಟಕ

karnataka

ETV Bharat / city

ಮದುವೆಯಾದ ಮೂರೇ ತಿಂಗಳಿಗೆ ಆತ್ಮಹತ್ಯೆ... ಕೊಲೆ ಅಂತಾ ಪೋಷಕರ ಆರೋಪ - Sucied Latest News for Bangalore

ಮದುವೆಯಾದ ಮೂರೇ ತಿಂಗಳಲ್ಲಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೃಷ್ಯಯ್ಯನ ಪಾಳ್ಯದ ಮನೆಯೊಂದರಲ್ಲಿ ನಡೆದಿದೆ.

ಮದುವೆಯಾದ ಮೂರೇ ತಿಂಗಳಿಗೆ ಆತ್ಮಹತ್ಯೆ

By

Published : Nov 2, 2019, 4:00 PM IST

ಬೆಂಗಳೂರು: ಮದುವೆಯಾದ ಮೂರೇ ತಿಂಗಳಲ್ಲಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಕೃಷ್ಯಯ್ಯನ ಪಾಳ್ಯದ ಮನೆಯೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮದುವೆಯಾದ ಮೂರೇ ತಿಂಗಳಿಗೆ ಆತ್ಮಹತ್ಯೆ

23 ವರ್ಷದ ಪ್ರಿಯಾಂಕ ಆತ್ಮಹತ್ಯೆ‌ ಮಾಡಿಕೊಂಡ ನವವಿವಾಹಿತೆ. ಧಾರವಾಡ ಮೂಲದ ಪ್ರಿಯಾಂಕ ಅದೇ ಊರಿನ ಗಣೇಶ್ ಎಂಬುವರ ಜೊತೆ ಮದುವೆಯಾಗಿದ್ದಳು.‌ ವಿವಾಹದ ಬಳಿಕ ನವದಂಪತಿ ಬೆಂಗಳೂರಿನಲ್ಲಿ ವಾಸ ಮಾಡಿಕೊಂಡಿದ್ದರು. ಸಾಯುವ ಮುನ್ನ ಪ್ರಿಯಾಂಕ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳ ಸಾವಿಗೆ ಗಂಡ ಗಣೇಶ್ ಹಾಗೂ ಅವರ ತಾಯಿ-ತಂದೆಯೇ ಕಾರಣ ಎಂದು ಪ್ರಿಯಾಂಕ ಪೋಷಕರು ಆರೋಪಿಸಿದ್ದಾರೆ. ಗಂಡ ಗಣೇಶ್ ಮೇಲೆ ಅನುಮಾನವಿದ್ದು, ಆತನಿಂದಲೇ ಕೊಲೆ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸುತ್ತಾರೆ.

ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಬೈಯ್ಯಪ್ಪನ ಹಳ್ಳಿ ಪೊಲೀಸರು, ಸದ್ಯ ಮೃತಳ ಗಂಡ ಗಣೇಶ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details