ಬೆಂಗಳೂರು: ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗಾದ ಭದ್ರತಾ ವೈಫಲ್ಯ ಬೆಳಕಿಗೆ ಬಂದ ನಂತರ ಮೋದಿ ಆಯಸ್ಸು ವೃದ್ಧಿಗೆ ದೇಶದ ಹಲವೆಡೆ ಹೋಮ, ಯಾಗಾದಿ ಕಾರ್ಯ ನಡೆಯುತ್ತಿದೆ. ಅದರಂತೆ ಮೋದಿಗಾಗಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಮಹಾ ಮೃತ್ಯುಂಜಯ ಹಾಗೂ ಸುದರ್ಶನ ಹೋಮ ಆಯೋಜನೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಯಸ್ಸು ವೃದ್ಧಿ, ಉತ್ತಮ ಆರೋಗ್ಯ ಹಾಗೂ ಯಶಸ್ಸಿಗೆ ಹಾರೈಸಿ 150 ಮಂದಿ ಪುರೋಹಿತರಿಂದ ಮಹಾ ಮೃತ್ಯುಂಜಯ ಹಾಗೂ ಮಹಾ ಸುದರ್ಶನ ಹೋಮ ನಡೆಸಲಾಗುತ್ತದೆ.