ಬೆಂಗಳೂರು: ಬೆನ್ನುಮೂಳೆಯ ತಳ ಭಾಗದಲ್ಲಿ ನರ ಜೀವಕೋಶದಲ್ಲಿನ ಅತ್ಯಂತ ಅಪರೂಪದ ಗಡ್ಡೆಯಾದ ಪ್ಯಾರಾಗ್ಯಾಂಗ್ಲಿಯೋಮವನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ ಎಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಅಪರೂಪದ ಗಡ್ಡೆ ಪ್ಯಾರಾಗ್ಯಾಂಗ್ಲಿಯೋಮ ಶಸ್ತ್ರ ಚಿಕಿತ್ಸೆ ಯಶಸ್ವಿ: ಡಾ. ಪ್ರವೀಣ್ - ನರರೋಗ ತಜ್ಞ ಡಾ. ಪ್ರವೀಣ್ ಎಂ. ಗಾಣಗಿ
ಬೆನ್ನುಮೂಳೆಯ ತಳ ಭಾಗದಲ್ಲಿ ನರ ಜೀವಕೋಶದಲ್ಲಿನ ಅತ್ಯಂತ ಅಪರೂಪದ ಗಡ್ಡೆಯಾದ ಪ್ಯಾರಾಗ್ಯಾಂಗ್ಲಿಯೋಮವನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಕುರಿತು ಆಸ್ಪತ್ರೆಯ ವೈದ್ಯ ಡಾ. ಕಾರ್ತಿಕ್ ಪ್ರಭಾಕರ್ ಮಾಹಿತಿ ನೀಡಿದ್ದಾರೆ.
ಹಲವಾರು ವರ್ಷಗಳಿಂದ ಅಧಿಕ ರಕ್ತದೊತ್ತಡಕ್ಕಾಗಿ ಔಷಧಿ ತಗೆದುಕೊಳ್ಳುತ್ತಿದ್ದೆ. ಕಳೆದ ಒಂದು ವರ್ಷದಿಂದ ಬೆನ್ನುಮೂಳೆಯ ಜತೆಗೆ ಬಲಗಾಲಿನ ಕೆಳಭಾಗದಲ್ಲಿ ಕಳೆದ 8 ತಿಂಗಳಿಂದ ನೋವು ಅನುಭವಿಸುತ್ತಿದ್ದೆ. ನಂತರ ಪರೀಕ್ಷೆ ಮಾಡಿಸಿದಾಗ ಪ್ಯಾರಾಗ್ಯಾಂಗ್ಲಿಯೋಮ ಗಡ್ಡೆ ಇರುವುದು ಕಂಡುಬಂದಿತ್ತು. ಕೂಡಲೇ ಮಣಿಪಾಲ ಆಸ್ಪತ್ರೆಯ ವೈದ್ಯರು ತನಗೆ ಸಂಕೀರ್ಣ ಶಸ್ತ್ರ ಚಿಕಿತ್ಸೆ ನೀಡಿದ್ದಾರೆ ಚಿಕಿತ್ಸೆಗೊಳಪಟ್ಟು ಗುಣಮುಖರಾಗಿರುವ ಜಗದೀಶ್ ತಮ್ಮ ಅನುಭವ ಹಂಚಿಕೊಂಡರು.
ಬಳಿಕ ಮಾತನಾಡಿದ ನರರೋಗ ತಜ್ಞ ಡಾ. ಪ್ರವೀಣ್ ಎಂ. ಗಾಣಗಿ,ಇತ್ತೀಚಿನ ಅಧ್ಯಯನದ ವರದಿ ಪ್ರಕಾರ ಪ್ರತಿ ವರ್ಷ 10 ಲಕ್ಷ ಜನರ ಪೈಕಿ ಇಬ್ಬರಲ್ಲಿ ಈ ರೀತಿಯ ಗಡ್ಡೆಗಳು ಕಂಡು ಬರುತ್ತವೆ. ಜೊತೆಗೆ ಶೇ. 0.2ರಷ್ಟು ಕಡಿಮೆ ಜನರಲ್ಲಿ ಇದು ಉನ್ನತ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಈ ರೀತಿಯ ಪ್ರಕರಣಗಳಲ್ಲಿ ಪಾರ್ಶ್ವವಾಯು ಹಾಗೂ ಹೃದಯಾಘಾತ ಅಥವಾ ಸಾವಿನಂತಹ ಗಂಭೀರ ಆರೋಗ್ಯ ತೊಂದರೆಗಳು ರೋಗಿಗೆ ಎದುರಾಗುತ್ತದೆ ಎಂದು ಮಾಹಿತಿ ನೀಡಿದರು.