ಕರ್ನಾಟಕ

karnataka

ETV Bharat / city

ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 10 ವರ್ಷದ ಬಾಲಕನಿಗೆ ಯಶಸ್ವಿ ಲಿವರ್‌ ಕಸಿ - Successful Liver transplant treatment

ಸಣ್ಣ ವಯಸ್ಸಿನಲ್ಲೇ ಯಕೃತ್​ ಫೈಲ್ಯೂರ್​ಗೊಂಡು ಕೃತಕ ಉಸಿರಾಟದಲ್ಲೇ ದಿನದೂಡುತ್ತಿದ್ದ ಬಾಲಕನಿಗೆ ಫೋರ್ಟಿಸ್​ ಆಸ್ಪತ್ರೆಯ ವೈದ್ಯರ ತಂಡ ಯಶ್ವಸ್ವಿ ಲಿವರ್​​ ಕಸಿ ನಡೆಸಿದೆ.

Boy with Parents and Doctors team
ಪೋಷಕರೊಂದಿಗೆ ಬಾಲಕ ಹಾಗೂ ವೈದ್ಯರ ತಂಡ

By

Published : Mar 31, 2022, 10:25 AM IST

Updated : Mar 31, 2022, 4:45 PM IST

ಬೆಂಗಳೂರು: 10 ವರ್ಷದಿಂದ ಹೆಪಟೋ ಪಲ್ಮನರಿ ಸಿಂಡ್ರೋಮ್‌‌ನಿಂದ ಬಳಲುತ್ತಿದ್ದ ಬಾಂಗ್ಲಾದೇಶ ಮೂಲದ ಬಾಲಕನಿಗೆ ನಗರದ ಫೊರ್ಟಿಸ್‌ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಲಿವರ್‌(ಯಕೃತ್​) ಕಸಿ ನಡೆಸಿದ್ದಾರೆ. ಫೋರ್ಟಿಸ್‌ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿ ಹಾಗೂ ಹೆಪಟಾಲಜಿ ಸಮಾಲೋಚಕ ಡಾ.ಕೆ.ಎಸ್‌.ಪ್ರಸನ್ನ ತಂಡ ಈ ಯಶಸ್ವಿ ಚಿಕಿತ್ಸೆ ಪೂರೈಸಿದವರು.

ಈ ಕುರಿತು ಮಾತನಾಡಿರುವ ಡಾ.ಪ್ರಸನ್ನ, 10 ವರ್ಷದ ಈ ಬಾಲಕ ಕೆಲ ವರ್ಷದಿಂದ ಹೆಪಟೋ ಪಲ್ಮನರಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದನು. ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದಲ್ಲದೇ ಹೃದಯ ಮತ್ತು ಶ್ವಾಸಕೋಶದ ಮಧ್ಯೆ ರಕ್ತ ಸಂಚಾರಕ್ಕೆ ಸಮಸ್ಯೆ ಮಾಡುತ್ತದೆ. 10 ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ರೋಗ ಇದಾಗಿದೆ ಎಂದು ಹೇಳಿದರು.

ಇದರಿಂದ ಬಾಲಕನಿಗೆ ಉಸಿರಾಟದ ಸಮಸ್ಯೆ ಎದುರಾಗಿ 16 ತಿಂಗಳಿನಿಂದ ಆಮ್ಲಜನಕದ ಸಹಾಯದಿಂದ ಉಸಿರಾಡುತ್ತಿದ್ದನು. ನಮ್ಮ ವೈದ್ಯರ ತಂಡ ಮಗುವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದಾಗ ಕಂಜೆನಿಟಲ್‌ ಇಂಟ್ರಾ ಹೆಪಾಟಿಕ್‌ ಫೋಟೊ ಸಿಸ್ಟಮಿಕ್‌ ಸ್ಟಂಟ್ಸ್‌ (ಐಪಿಎಸ್‌ಎಸ್‌) ಪೋಟಲ್‌ ನರಗಳು ಬಾಧಿಸುತ್ತಿರುವುದು ಕಂಡು ಬಂದಿತ್ತು.

ಈ ಎಲ್ಲದರ ಪರಿಣಾಮ ಬಾಲಕ ಲಿವರ್‌ ಅನ್ನು ಕಳೆದುಕೊಂಡಿದ್ದನು. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಲಿವರ್‌ ಫೈಲ್ಯೂರ್​ ಆಗುವುದು ಅಪರೂಪ. ಹೀಗಾಗಿ ಶೀಘ್ರದಲ್ಲೇ ಬಾಲಕನಿಗೆ ಲಿವರ್‌ ಕಸಿ ಅಗತ್ಯವಿತ್ತು. ಆದರೆ, ತಂದೆ ಡಯಾಬಿಟಿಕ್‌ ರೋಗಿ ಹಾಗೂ ತಾಯಿ ಗರ್ಭಿಣಿಯಾಗಿದ್ದರಿಂದ ಅವರ ಸ್ವಂತ ಅತ್ತೆಯೇ ಲಿವರ್‌ ಭಾಗವನ್ನು ದಾನ ಮಾಡಲು ಒಪ್ಪಿದರು ಎಂದು ಹೇಳಿದರು.

ಇದನ್ನೂ ಓದಿ:ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ; 1 ಮತ್ತು 3 ದಿನದ ಪಾಸ್ ಪರಿಚಯಿಸಲು ಬಿಎಂಆರ್​ಸಿಎಲ್ ಸನ್ನದ್ಧ !

ಕಸಿ ಸರ್ಜರಿ ಹಿರಿಯ ಸಲಹೆಗಾರ ಡಾ.ಮಹೇಶ್‌ ಗೋಪಶೆಟ್ಟಿ ಮಾತನಾಡಿ, ಈ ಬಾಲಕ ಲಿವರ್‌ ಫೈಲ್ಯೂರ್‌ನಿಂದ ಬಳಲುತ್ತಿರುವ ಜೊತೆಗೆ ಅತಿಯಾದ ಉಸಿರಾಟದ ಸಮಸ್ಯೆ ಹೊಂದಿದ್ದನು. ಪ್ರತಿಕ್ಷಣ ಅವನು ಕೃತಕ ಆಮ್ಲಜನಕವಿಲ್ಲದೆ ಉಸಿರಾಡುವುದೇ ಕಷ್ಟವಾಗಿತ್ತು. ನಮ್ಮ ತಂಡ ಶೀಘ್ರವೇ ಕಾರ್ಯಪ್ರವೃತ್ತವಾಗಿ ಮಗುವಿಗೆ ಲಿವರ್‌ ಕಸಿ ಮಾಡಲಾಗಿದೆ.

ಬಾಲಕನಿಗೆ ಲಿವರ್‌ ಕಸಿ ಮಾಡುವುದು ಸವಾಲಿನ ಕೆಲಸವೇ ಆಗಿತ್ತು. ಆದರೂ ನಾವು ಹೆಚ್ಚು ಜಾಗ್ರತೆ ವಹಿಸಿ ಚಿಕಿತ್ಸೆ ಮಾಡಿದ್ದೇವೆ. ಕಸಿ ಮಾಡಿದ ಮೂರು ದಿನಗಳ ನಂತರ ಬಾಲಕನನ್ನು ವೆಂಟಿಲೇಟರ್‌ನಿಂದ ಹೊರ ತೆಗೆಯಲಾಯಿತು. ಇದೀಗ ಬಾಲಕ ಕೃತಕ ಆಮ್ಲಜನಕವಿಲ್ಲದೇ ಉಸಿರಾಡುತ್ತಿದ್ದಾನೆ ಎಂದು ವಿವರಿಸಿದರು.

Last Updated : Mar 31, 2022, 4:45 PM IST

ABOUT THE AUTHOR

...view details