ಕರ್ನಾಟಕ

karnataka

By

Published : May 31, 2020, 11:16 PM IST

ETV Bharat / city

ಕೊರೊನಾ ಸಂಕಷ್ಟದಲ್ಲೂ ಫೊರ್ಟೀಸ್​ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಕಿಡ್ನಿ ಕಸಿ!

ಕೊರೊನಾ ಲಾಕ್‍ಡೌನ್ ನಡುವೆಯೂ ಬನ್ನೇರುಘಟ್ಟ ರಸ್ತೆಯ ಫೊರ್ಟೀಸ್ ಆಸ್ಪತ್ರೆಯ ವೈದ್ಯರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

Successful kidney transplant potis hospital doctors
ಕೊರೊನಾದ ಸಂಕಷ್ಟದಲ್ಲೂ ಫೊಟೀಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಕಿಡ್ನಿ ಕಸಿ

ಬೆಂಗಳೂರು: ಲಾಕ್‍ಡೌನ್ ನಡುವೆ ಕೂಡ ಬನ್ನೇರುಘಟ್ಟ ರಸ್ತೆಯ ಫೊರ್ಟೀಸ್ ಆಸ್ಪತ್ರೆಯ ವೈದ್ಯರಿಂದ 53 ವರ್ಷದ ರೋಗಿಗೆ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ರೋಗಿ ಮೂತ್ರಪಿಂಡ ವೈಫಲ್ಯದ ಅಂತಿಮ ಹಂತದಿಂದ ಬಳಲುತ್ತಿದ್ದರು. ಅವರಿಗೆ ತುರ್ತಾಗಿ ಮೂತ್ರಪಿಂಡ ಕಸಿ ಮಾಡಬೇಕಿತ್ತು. ಈ ಪರಿಸ್ಥಿತಿಯನ್ನು ಅರಿತ ಫೊರ್ಟೀಸ್ ಆಸ್ಪತ್ರೆ ಟ್ರಾನ್ಸ್‍ಪ್ಲಾಂಟ್ ರೊಬೋಟಿಕ್ ಸರ್ಜರಿಯ ನಿರ್ದೇಶಕ ಡಾ. ಮೋಹನ್ ಕೇಶವ್​ಮೂರ್ತಿ ನೇತೃತ್ವದ ತಜ್ಞ ವೈದ್ಯರ ತಂಡವು ಈ ಯಶಸ್ವಿ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಿ ರೋಗಿಯ ಜೀವ ಉಳಿಸಿದ್ದಾರೆ. ರೋಗಿಯು ಅಂತಿಮ ಹಂತದ ಮೂತ್ರಪಿಂಡ ರೋಗದಿಂದ ಬಳಲುತ್ತಿದ್ದರು ಮತ್ತು ಮೂತ್ರಪಿಂಡ ಕಸಿಗಾಗಿ ಫೊರ್ಟೀಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಮೆಲ್ಲಿಟಸ್ ಮತ್ತು ಹೃದ್ರೋಗದಿಂದ ಬಳಲುತ್ತಿದ್ದರು. ಮೂತ್ರಪಿಂಡವನ್ನು ಕಸಿಯ ಅಗತ್ಯತೆಯನ್ನು ಅರಿತು ಅವರ ಸಹೋದರ ಒಂದು ಮೂತ್ರಪಿಂಡ ನೀಡಲು ನಿರ್ಧರಿಸಿದರು.

ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯರು, ಈ ಪ್ರಕರಣದಲ್ಲಿ ರೋಗಿಗೆ ತುರ್ತಾಗಿ ಮೂತ್ರಪಿಂಡವನ್ನು ಕಸಿ ಮಾಡಬೇಕಿತ್ತು. ಒಂದು ವೇಳೆ ತಡವಾಗಿದ್ದರೆ ರೋಗಿಯ ಪರಿಸ್ಥಿತಿ ಚಿಂತಾಜನಕವಾಗುತ್ತಿತ್ತು. ಅದೃಷ್ಠವಶಾತ್ ಅವರ ಕಿರಿಯ ಸಹೋದರ ಮೂತ್ರಪಿಂಡ ದಾನ ಮಾಡಲು ನಿರ್ಧರಿಸಿದ್ದರು. ಎಲ್ಲ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ನಾವು ಮೂತ್ರಪಿಂಡ ಕಸಿ ಪ್ರಕ್ರಿಯೆಯನ್ನು ನಡೆಸಿದ್ದೇವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಈ ರೋಗಿಗೆ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸುವುದು ಸವಾಲಿನದ್ದಾಗಿತ್ತು.

ಯಶಸ್ವಿ ಶಸ್ತ್ರಚಿಕಿತ್ಸೆಯ ಒಂದು ವಾರದ ನಂತರ ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಮಾಡಲಾಗಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾವು ರೋಗಿಯ ಜತೆ ಇರಲು ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಿದ್ದೇವು. ರೋಗಿಗೂ ಸಹ ನಾವು ಶಸ್ತ್ರಚಿಕಿತ್ಸೆ ನಂತರ ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳದೇ ಅವರನ್ನು ಡಿಸ್ಚಾರ್ಜ್ ಮಾಡಿದ್ದೇವೆ. ಈ ಮೂಲಕ ಕೋವಿಡ್-19 ಸೋಂಕು ಹರಡುವ ಅಪಾಯದಿಂದ ದೂರವಿರುವಂತೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರೋಗಿಯ ಸಹೋದರ, ನಮ್ಮ ಅಣ್ಣನ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ನಾನು ಮತ್ತು ನಮ್ಮ ಕುಟುಂಬ ತುಂಬಾ ಚಿಂತೆಗೀಡಾಗಿದ್ದೆವು. ದೇಶಾದ್ಯಂತ ಇರುವ ಲಾಕ್‍ಡೌನ್ ನಮ್ಮ ಆತಂಕವನ್ನು ಮತ್ತಷ್ಟು ಹೆಚ್ಚಿಸಿತ್ತು. ಇಷ್ಟೇ ಅಲ್ಲದೇ, ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸುವ ಬಗ್ಗೆಯೂ ಆತಂಕ ಉಂಟಾಗಿತ್ತು. ಆದಾಗ್ಯೂ, ನಾವು ಫೊರ್ಟೀಸ್ ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆಯ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ನಮಗೆ ಖಾತರಿ ಉಂಟಾಯಿತು. ಇಂತಹ ಸಾಂಕ್ರಾಮಿಕ ರೋಗದ ಪಿಡುಗಿನ ನಡುವೆಯೂ ನನ್ನ ಅಣ್ಣನಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಸೂಕ್ತ ಚಿಕಿತ್ಸೆಯನ್ನು ನೀಡಿರುವ ಫೊರ್ಟೀಸ್ ಆಸ್ಪತ್ರೆಯ ವೈದ್ಯರು ಮತ್ತು ಎಲ್ಲಾ ಸಿಬ್ಬಂದಿಗೆ ನಾವು ಚಿರಋಣಿಯಾಗಿದ್ದೇವೆ’’ ಎಂದರು.

ABOUT THE AUTHOR

...view details