ಕರ್ನಾಟಕ

karnataka

ETV Bharat / city

COVID Vaccine: ಲಸಿಕೆ ಪಡೆದ ಶೇ.92ರಷ್ಟು ಆರೋಗ್ಯ ಕಾರ್ಯಕರ್ತರು ಸೋಂಕು ತಗುಲಿದರೂ ಸುರಕ್ಷಿತ - ಫೋರ್ಟಿಸ್ ಹೆಲ್ತ್ ಕೇರ್ ಅಧ್ಯಯನ

2021 ಜನವರಿಯಿಂದ ಮೇ ತಿಂಗಳ ಅವಧಿಯಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡು ಡೋಸ್ ಲಸಿಕೆ ಪಡೆದ 16 ಸಾವಿರ ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರಲ್ಲಿ ಶೇ.92ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದ್ದರೂ ಹೆಚ್ಚು ಬಾಧಿಸದೇ ಸೌಮ್ಯ ಲಕ್ಷಣಗಳಿಂದ ಗುಣಮುಖರಾಗಿದ್ದಾರೆ. ಎರಡೂ ಡೋಸ್ ಪಡೆದವರಲ್ಲಿ ಶೇ.6 ರಷ್ಟು ಮಂದಿ ಮಾತ್ರ ಸೋಂಕಿಗೆ ಒಳಗಾಗಿದ್ದಾರೆ.

study-by-fortis-health-care-on-vaccinated-health-workers
ಫೋರ್ಟಿಸ್ ಹೆಲ್ತ್‌ಕೇರ್ ಅಧ್ಯಯನದ ವರದಿ

By

Published : Jun 17, 2021, 10:30 PM IST

ಬೆಂಗಳೂರು: ಕೋವಿಡ್-19 ಲಸಿಕೆ ಪಡೆದ ಶೇ.92ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಸೋಂಕು ತಗುಲಿದರೂ, ಹೆಚ್ಚು ಬಾಧಿಸದೇ, ಕೇವಲ ಸೌಮ್ಯ ಸ್ವಭಾವದ ಲಕ್ಷಣಗಳಿಂದ ಗುಣಮುಖರಾಗಿದ್ದಾರೆ ಎಂಬ ಅಂಶವು ಫೋರ್ಟಿಸ್ ಹೆಲ್ತ್ ಕೇರ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಫೋರ್ಟಿಸ್ ಹೆಲ್ತ್​ ಕೇರ್ ಸಂಸ್ಥೆಯು ನಡೆಸಿದ ಅಧ್ಯಯನವನ್ನು ಗುರುವಾರ ಬಿಡುಗಡೆ ಮಾಡಿದ್ದು, ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.

ಫೋರ್ಟಿಸ್ ಹೆಲ್ತ್‌ಕೇರ್ ಅಧ್ಯಯನದ ವರದಿ

2021 ಜನವರಿಯಿಂದ ಮೇ ತಿಂಗಳ ಅವಧಿಯಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡು ಡೋಸ್ ಲಸಿಕೆ ಪಡೆದ 16 ಸಾವಿರ ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರಲ್ಲಿ ಶೇ.92ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದ್ದರೂ ಹೆಚ್ಚು ಬಾಧಿಸದೇ ಸೌಮ್ಯ ಲಕ್ಷಣಗಳಿಂದ ಗುಣಮುಖರಾಗಿದ್ದಾರೆ. ಎರಡೂ ಡೋಸ್ ಪಡೆದವರಲ್ಲಿ ಶೇ.6 ರಷ್ಟು ಮಂದಿಯರು ಮಾತ್ರ ಸೋಂಕಿಗೆ ಒಳಗಾಗಿದ್ದಾರೆ. ಇನ್ನೂ ಶೇ. 7ರಷ್ಟು ಮಂದಿ ಆಕ್ಸಿಜನ್‌ಯುಕ್ತ ಬೆಡ್‌ಗಳನ್ನ ಅವಲಂಬಿಸಿದ್ದರು, ಕೇವಲ ಶೇ.1ರಷ್ಟು ಮಂದಿ ಮಾತ್ರ ಐಸಿಯು ಬೆಡ್‌ಗಳನ್ನ ಅವಲಂಬಿಸಿ ಗುಣಮುಖರಾಗಿದ್ದಾರೆ ಎಂಬುದು ವರದಿಯಿಂದ ತಿಳಿದು ಬಂದಿದೆ.

ಫೋರ್ಟಿಸ್ ಹೆಲ್ತ್‌ಕೇರ್ ಅಧ್ಯಯನದ ವರದಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಫೋರ್ಟಿಸ್‌ನ ಸ್ಟ್ರಾಟರ್ಜಿ ಮತ್ತು ಆಪರೇಷನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಬಿಷ್ಣು ಪಾಣಿಗ್ರಹಿ, ಭಾರತದಲ್ಲಿ ಲಭ್ಯವಿರುವ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದು ಈ ಅಧ್ಯಯನದ ಮೂಲಕ ತಿಳಿದು ಬಂದಿದೆ. ಹೀಗಾಗಿ ಲಸಿಕೆ ಉತ್ಪಾದನೆಯನ್ನು ಹೆಚ್ಚು ಮಾಡಿ, ಶೀಘ್ರವೇ ಎಲ್ಲರಿಗೂ ವ್ಯಾಕ್ಸಿನ್​​ ನೀಡುವುದರಿಂದ ಸೋಂಕಿನಿಂದಾಗುವ ಪರಿಣಾಮದಿಂದ ತಪ್ಪಿಸಿಕೊಳ್ಳಬಹುದು ಎಂದಿದ್ದಾರೆ.

ABOUT THE AUTHOR

...view details