ಬೆಂಗಳೂರು:ಮಹಾನಗರ ಬೆಂಗಳೂರಲ್ಲಿ ಜೀವನ ಸಾಗಿಸುವುದಕ್ಕಾಗಿ ಬೀದಿ ವ್ಯಾಪಾರಿಗಳ ಸಂಖ್ಯೆ ಬಹಳ ದೊಡ್ಡದಿದೆ. ಇವರೆಲ್ಲರ ಸಮಸ್ಯೆಗಳನ್ನು ಬಗೆಹರಿಸಿ, ಸುಲಲಿತ ಜೀವನ ನಡೆಸೋದಕ್ಕೆ ಅನುವು ಮಾಡಿಕೊಡುವ ಜವಾಬ್ದಾರಿ ಸರ್ಕಾರಗಳದ್ದಾಗಿರುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಜೀವನೋಪಾಯ ರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆ-2014 ಅನ್ನು ಜಾರಿಗೊಳಿಸಲಾಗಿತ್ತು. ಈ ಕಾಯ್ದೆಯ ಪ್ರಕಾರ 2016 ಹಾಗೂ 2017ರಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆಯ ನಡೆಸಲು ಸೂಚಿಸಲಾಯಿತು.
2017ರಲ್ಲಿ ಆರಂಭವಾದ ಸಮೀಕ್ಷೆ ಇನ್ನೂ ಕೂಡಾ ಪೂರ್ಣಗೊಂಡಿಲ್ಲ. ಕೇವಲ 26 ಸಾವಿರ ವ್ಯಾಪಾರಿಗಳ ಸರ್ವೇ ಮಾತ್ರ ನಡೆಸಿ ಕೇವಲ 15 ಸಾವಿರ ಜನರಿಗೆ ಐಡಿ ಕಾರ್ಡ್ ಕೊಟ್ಟು ಕೈತೊಳೆದುಕೊಂಡಿದೆ. ಇದರಿಂದ ಐಡಿ ಕಾರ್ಡ್ ಇಲ್ಲದವರಿಗೆ ಕಿರಿಕಿರಿಯಾಗಿದ್ದು, ಕೆಲವರಿಗೆ ಲಾಕ್ಡೌನ್ ಬಳಿಕ 10 ಸಾವಿರ ರೂಪಾಯಿಯನ್ನು ಸಾಲದ ರೂಪದಲ್ಲಿ ಕೊಟ್ಟಿದೆ. ಇನ್ನೂ ಕೆಲವು ಮಂದಿ ಕೊರೊನಾ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.