ಕರ್ನಾಟಕ

karnataka

ETV Bharat / city

ಕೊರೊನಾ‌ ಹೊಡೆತಕ್ಕೆ ತತ್ತರಿಸಿದ ಬೀದಿ ಬದಿ ವ್ಯಾಪಾರಿಗಳು: 15,000 ಪರಿಹಾರಕ್ಕೆ ಆಗ್ರಹ - ಬೆಂಗಳೂರು ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ

ರಾಜ್ಯದಲ್ಲಿ ಕೊರೊನಾ ಸುನಾಮಿ ಅಪ್ಪಳಿಸಿದ್ದೇ ಅಪ್ಪಳಿಸಿದ್ದು, ಜನರ ಜೀವನ‌ ಶೈಲಿಯೇ ಬದಲಾಗಿ ಹೋಯ್ತು. ಬೀದಿ ಬದಿಯಲ್ಲಿ ಸಣ್ಣಪುಟ್ಟ ವಸ್ತುಗಳನ್ನು ಮಾರುತ್ತಾ ಜೀವನ‌ ಸಾಗಿಸುತ್ತಿದ್ದ ಜನರ ಬದುಕೀಗ ಸಂಕಷ್ಟದಲ್ಲಿದೆ. ಹೀಗಾಗಿ ಇಂದು ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘದಿಂದ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.

street-side-shoppers-protest
ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ

By

Published : Jul 18, 2020, 3:12 PM IST

ಬೆಂಗಳೂರು: ಮಹಾನಗರದಲ್ಲಿ ಬೀದಿ ವ್ಯಾಪಾರಿಗಳ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಮಾಡಲಾಗುತ್ತಿದೆ.

3 ತಿಂಗಳಿಂದ ಸರಿಯಾದ ವ್ಯಾಪಾರವಿಲ್ಲ, ಮನೆ ಬಾಡಿಗೆ ಕಟ್ಟಲು ಆಗ್ತಿಲ್ಲ, ಮಕ್ಕಳ ಪೋಷಣೆ ಸೇರಿ ಹತ್ತಾರು ಸಮಸ್ಯೆಗಳಿಂದ ಸಾಲ ಮಾಡುವ ಪರಿಸ್ಥಿತಿ ಉಂಟಾಗಿದೆ.‌ ಹೀಗಾಗಿ, ಸರ್ಕಾರ 15,000 ಪರಿಹಾರ ಧನ ನೀಡಬೇಕೆಂದು ಒತ್ತಾಯಿಸಿ ಒಂದು ದಿನದ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ

ಯಶವಂತಪುರ ಮಾರುಕಟ್ಟೆ, ಮೂಡಲಪಾಳ್ಯ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಪ್ರತಿಭಟನೆ ಫಲಕ ಹಿಡಿದು ವ್ಯಾಪಾರ ಮಾಡುತ್ತಿರುವುದು ಕಂಡು ಬಂತು.

ABOUT THE AUTHOR

...view details