ಕರ್ನಾಟಕ

karnataka

ETV Bharat / city

ಕಿಡಿಗೇಡಿಯ ಅಸಭ್ಯ ವರ್ತನೆ.. ಬೆಂಗಳೂರಲ್ಲಿ ಅಪರಿಚಿತನ ಪುಂಡಾಟಕ್ಕೆ ರಾತ್ರಿಯಿಡಿ ಹೈರಾಣಾದ ಕುಟುಂಬ! - Stranger following the car at midnight

ಸಂಬಂಧಿಕರ ಮನೆಗೆ ಹೋಗಿ ತಡರಾತ್ರಿ ಕಾರಿನಲ್ಲಿ ಬರುತ್ತಿದ್ದವರ ಜೊತೆ ಕಿಡಿಗೇಡಿಯೊಬ್ಬ ಅಸಭ್ಯವಾಗಿ ವರ್ತಿಸಿ, ಪುಂಡಾಟ ಮೆರೆದಿರುವ ಘಟನೆ ಬೆಂಗಳೂರು ನಗರದಲ್ಲಿ ಬೆಳಕಿಗೆ ಬಂದಿದೆ.

ಅಪರಿಚಿತನ ಪುಂಡಾಟ
ಅಪರಿಚಿತನ ಪುಂಡಾಟ

By

Published : Dec 12, 2021, 9:57 AM IST

ಬೆಂಗಳೂರು: ತಡರಾತ್ರಿ ಹೆಬ್ಬಾಳ ಸರ್ಕಲ್ ಬಳಿ ಅಪರಿಚಿತನ ಪುಂಡಾಟಕ್ಕೆ ಕುಟುಂಬವೊಂದು ನಲುಗಿರುವ ಘಟನೆ ತವಡಾಗಿ ಬೆಳಕಿಗೆ ಬಂದಿದೆ.

ಡಿ.10ರಂದು ರಾತ್ರಿ ಹೊಸಕೋಟೆಯ ಸಂಬಂಧಿಕರ ಮನೆಗೆ ಹೋಗಿ ಗೃಹಿಣಿ ದೀಪಾ ಶ್ರೀಕುಮಾರ್ ವಾಪಸ್​ ಆಗುತ್ತಿದ್ದಾಗ ಹೆಬ್ಬಾಳ ಸರ್ಕಲ್ ಬಳಿ ಕಾರು ಪಂಚರ್ ಆಗಿತ್ತು. ಕಾರಿನಲ್ಲಿದ್ದ ಯುವತಿ ಸೇರಿ ಇಬ್ಬರು‌ ಮಕ್ಕಳ ಸಹಾಯದಿಂದ‌ ಟೈರ್ ಬದಲಾಯಿಸುತ್ತಿದ್ದರು‌‌. ಈ ವೇಳೆ‌ ಕಾರಿನಲ್ಲಿ ಬಂದ ದುಷ್ಕರ್ಮಿಯೋರ್ವ ಯುವತಿಯನ್ನು ಕಂಡು ಆಸಭ್ಯವಾಗಿ ವರ್ತಿಸಿದ್ದಾನೆ.

ಇದಕ್ಕೆ ಕೇರ್ ಮಾಡದೆ ಆತನಿಗೆ ಬೈದು ಅಲ್ಲಿಂದ ಕುಟುಂಬಸ್ಥರು ಹೊರಟಿದ್ದಾರೆ. ಇದಾದ ಬಳಿಕ ಕಿಡಿಗೇಡಿ ಕಾರನ್ನು ಫಾಲೋ ಮಾಡಿದ್ದಾನೆ. ಗೊರಗುಂಟೆಪಾಳ್ಯದವರೆಗೂ ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ವರ್ತಿಸಿದ್ದಾನೆ.

ಈ ಕುರಿತು ‌ದೀಪಾ ಶ್ರೀಕುಮಾರ್ ಪೊಲೀಸರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ. ಗೊರಗುಂಟೆಪಾಳ್ಯ ಬಳಿ ಹೊಯ್ಸಳ ಪೊಲೀಸರನ್ನು ನೋಡಿದ ಕಿಡಿಗೇಡಿ ಎಸ್ಕೇಪ್ ಆಗಿದ್ದಾನೆ. ಮುಂಜಾನೆವರೆಗೂ ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ವಿಶ್ರಾಂತಿ ಪಡೆದ ದೀಪಾ ಕುಟುಂಬಸ್ಥರು ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ABOUT THE AUTHOR

...view details