ಬೆಂಗಳೂರು :ಕರ್ನಾಟಕ ಕಂಟ್ರೋಲ್ ರೂಂಗೆ ಬಂದಿರುವ ಮಾಹಿತಿ ಪ್ರಕಾರ ಉಕ್ರೇನ್‌ನಲ್ಲಿ ರಾಜ್ಯದ 454 ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ನೋಡಲ್ ಅಧಿಕಾರಿ ಮನೋಜ್ ರಾಜನ್ ತಿಳಿಸಿದ್ದಾರೆ.
ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆವರೆಗೂ ಕರ್ನಾಟಕದ 37 ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದಾರೆ. ರಾತ್ರಿ ಉಡುಪಿ ಮೂಲದ ವಿದ್ಯಾರ್ಥಿ ಬಂದಿದ್ದಾರೆ. ಇಂದು ಸಂಜೆ ಏರ್ ಏಷ್ಯಾ ಮೂಲಕ 6 ಜನ ವಿದ್ಯಾರ್ಥಿಗಳು ಬರ್ತಾರೆ.
ಇಂದು ರಾತ್ರಿ ಒಂದು ಫ್ಲೈಟ್ ಬರ್ತಿದೆ, ನಾಳೆ ಮುಂಬೈಗೆ ಒಂದು ಫ್ಲೈಟ್ ಬರುತ್ತೆ. ಅದರಲ್ಲಿ ಎಷ್ಟು ಕನ್ನಡಿಗರು ಇದ್ದಾರೆ ಅಂತಾ ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳನ್ನು ಸಂಪರ್ಕಿಸಿ ತಿಳಿಸಲಾಗುವುದು. ಸದ್ಯ ಈಗ ಉಕ್ರೇನ್‌ನಲ್ಲಿ 3 ಕಡೆ ಕರ್ಫ್ಯೂ ಇದೆ ಎಂದರು.