ಬೆಂಗಳೂರು:ಕಳೆದ 3 ವಾರಗಳಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸುಧಾರಣಾ ಕ್ರಮಗಳ ಘೋಷಣೆ ಮಾಡುತ್ತಿದ್ದಾರೆ. ಇಂದಿನ ಕಾರ್ಪೊರೇಟ್ ತೆರಿಗೆ ಸುಧಾರಣಾ ಕ್ರಮದಿಂದ ಷೇರುಪೇಟೆ 1000 ಅಂಕ ಏರಿಕೆ ಕಂಡಿದೆ. ಈ ರೀತಿಯ ಹಂತ ಹಂತದ ಸುಧಾರಣಾ ಕ್ರಮಗಳಿಂದ ದೇಶದ ಆರ್ಥಿಕತೆ ವೃದ್ಧಿಸುತ್ತದೆ ಎಂದು ಆರ್ಥಿಕ ತಜ್ಞ ನಿತ್ಯಾನಂದ ಅಭಿಪ್ರಾಯ ಪಟ್ಟಿದ್ದಾರೆ.
ಹಂತ ಹಂತವಾಗಿ ಆರ್ಥಿಕತೆಗೆ ಉತ್ತೇಜನೆ ನೀಡಿದ್ರೆ, ದೇಶದ ಸ್ಥಿತಿ ಸುಧಾರಿಸುತ್ತದೆ: ತಜ್ಞರ ಅಂಬೋಣ - Finance Minister Nirmala Sitharaman
ಕಳೆದ 3 ವಾರಗಳಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸುಧಾರಣಾ ಕ್ರಮಗಳ ಘೋಷಣೆ ಮಾಡುತ್ತಿದ್ದಾರೆ. ಇಂದಿನ ಮಹತ್ವದ ಕಾರ್ಪೊರೇಟ್ ತೆರಿಗೆ ಸುಧಾರಣಾ ಕ್ರಮದಿಂದ ಷೇರುಪೇಟೆ 1000 ಅಂಕಗಳಷ್ಟು ಏರಿಕೆ ಕಂಡಿದೆ. ಈ ರೀತಿಯ 'ಬೂಸ್ಟರ್ ಡೋಸ್'ನಿಂದ ದೇಶದ ಆರ್ಥಿಕತೆ ವೃದ್ಧಿಸುತ್ತದೆ ಎಂದು ಆರ್ಥಿಕ ತಜ್ಞ ನಿತ್ಯಾನಂದ ಅಭಿಪ್ರಾಯಪಟ್ಟಿದ್ದಾರೆ.
ಹಂತ ಹಂತವಾಗಿ ಆರ್ಥಿಕತೆಗೆ ಉತ್ತೇಜನೆ ನೀಡಿದ್ರೆ, ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ: ಆರ್ಥಿಕ ತಜ್ಞ ನಿತ್ಯಾನಂದ
ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಕಡಿತ ಮಾಡಿರುವ ನಿರ್ಧಾರ ಸ್ವಾಗತಿಸಿರುವ ಆರ್ಥಿಕ ತಜ್ಞ ನಿತ್ಯಾನಂದ, ಶೇಕಡ 5ರಷ್ಟು ತೆರಿಗೆ ಕಡಿತ ಹಾಗೂ ಹೊಸ ಉದ್ಯಮಗಳಿಗೆ ತೆರಿಗೆ ಕಡಿತದಿಂದ ಸಂಸ್ಥೆಗಳಿಗೆ ಸಾಕಷ್ಟು ಉಪಯೋಗವಾಗಲಿದೆ. ಹೊಸ ಸಂಸ್ಥೆಗಳು ಈಗ 15% ತೆರಿಗೆ ಕಟ್ಟಬೇಕಾಗುತ್ತದೆ. ಇದರಿಂದ ಸಣ್ಣ ಕೈಗಾರಿಕೆಗಳು ಹೆಚ್ಚು ರಫ್ತು ಮಾಡುವ ಅವಕಾಶ ಇರುತ್ತದೆ. ಜೊತೆಗೆ ಉದ್ಯೋಗ ಸೃಷ್ಟಿಗೂ ಕೇಂದ್ರದ ನಡೆ ಪೂರಕವಾಗಿದೆ ಎಂದರು.