ಬೆಂಗಳೂರು: ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯ ಅನುದಾನದಲ್ಲಿ ಶೇ. 25ರಷ್ಟು ಮೊತ್ತವನ್ನು ಕೋವಿಡ್-19 ಉದ್ದೇಶಕ್ಕೆ ಬಳಸಲು ಸರ್ಕಾರ ಅನುಮತಿ ನೀಡಿದೆ.
ಓದಿ: ರೆಮ್ಡೆಸಿವಿರ್ ಅಕ್ರಮ ದಾಸ್ತಾನು ಆರೋಪ: ಲೆಕ್ಕಪರಿಶೋಧನೆ ನಡೆಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ. ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ತಲಾ 2 ರೂ. ಕೋಟಿ ಅನುದಾನವನ್ನು ಒದಗಿಸುತ್ತದೆ. ಈ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸುವಾಗ ಕನಿಷ್ಠ ಶೇ.25 ರಷ್ಟು ಅನುದಾನವನ್ನು ಕೋವಿಡ್-19 ಸಂಬಂಧಿತ ಹಾಗೂ ಆಸ್ಪತ್ರೆಗಳ ಸುಧಾರಣೆಗೆ ಬಳಸಿಕೊಳ್ಳಲು ಅನುಮತಿ ನೀಡಿದೆ.
ಕೋವಿಡ್ ನಿರ್ವಹಣೆಗಾಗಿ ಅಗತ್ಯ ಹಣಕಾಸು ಹೊಂದಿಸಲು ಸರ್ಕಾರ ಶಾಸಕರ ನಿಧಿಯ ಹಣವನ್ನು ಬಳಸಲು ಅನುಮತಿ ನೀಡಿದೆ. ಕಳೆದ ವರ್ಷನೂ ಮೊದಲ ಕೋವಿಡ್ ಅಲೆಯ ಸಂದರ್ಭ ಶಾಸಕರ ನಿಧಿಯ ಅನುದಾನವನ್ನು ಕೋವಿಡ್-19 ಉದ್ದೇಶಕ್ಕೆ ಬಳಸಲು ಅನುಮತಿ ನೀಡಲಾಗಿತ್ತು.