ಕರ್ನಾಟಕ

karnataka

ETV Bharat / city

ಜಿಎಸ್​​ಟಿ ಕೌನ್ಸಿಲ್ ಸಭೆ ಮೇಲೆ ಬೆಟ್ಟದಷ್ಟು ನಿರೀಕ್ಷೆ: ಪರಿಹಾರ, ತೆರಿಗೆ ವಿನಾಯಿತಿಗೆ ಒತ್ತಾಯಿಸಲಿದೆ ರಾಜ್ಯ ಸರ್ಕಾರ - ಲಾಕ್‌ಡೌನ್​ನಿಂದ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿರುವ ರಾಜ್ಯ

ಜಿಎಸ್​ಟಿ ಕೌನ್ಸಿಲ್​ ಸಭೆಯಲ್ಲಿ ಕೋವಿಡ್ ಸಂಬಂಧಿತ ಔಷಧ, ಸಲಕರಣೆಗಳಿಗೆ ಜಿಎಸ್ ಟಿ ತೆರಿಗೆ ವಿನಾಯಿತಿ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ರೆಮ್ಡಿಸಿವಿರ್, ಕೋವಿಡ್ ಲಸಿಕೆ, ವೆಂಟಿಲೇಟರ್ ಇತರ ಉಪಕರಣಗಳಿಗೆ ಜಿಎಸ್ ಟಿ ತೆರಿಗೆಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಲಿದೆ. ಪಿಪಿಇ ಕಿಟ್, ಸ್ಯಾನಿಟೈಸರ್, ಮಾಸ್ಕ್, ಆಕ್ಸಿಮೀಟರ್ ಗಳ ಮೇಲಿನ ಜಿಎಸ್ ಟಿ ತೆರಿಗೆಯಿಂದಲೂ ವಿನಾಯಿತಿ ನೀಡಲು ರಾಜ್ಯ ಸರ್ಕಾರ ಒತ್ತಾಯಿಸಲಿದೆ.

 State government will demand tax relief in GST council  Meeting
State government will demand tax relief in GST council Meeting

By

Published : May 24, 2021, 3:10 PM IST

ಬೆಂಗಳೂರು: ಲಾಕ್‌ಡೌನ್​ನಿಂದ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿರುವ ರಾಜ್ಯ ಜಿಎಸ್​ಟಿ ಕೌನ್ಸಿಲ್ ಸಭೆ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟಿದೆ. ಲಾಕ್‌ಡೌನ್ ನಿಂದ ಆರ್ಥಿಕವಾಗಿ ಮುಗ್ಗರಿಸಿರುವ ಕರ್ನಾಟಕ ಹೆಚ್ಚಿನ ಜಿಎಸ್ ಟಿ ಪರಿಹಾರದ ನಿರೀಕ್ಷೆಯಲ್ಲಿದೆ.

ಮೇ 28ಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಮಹತ್ವದ ಜಿಎಸ್ ಟಿ ಕೌನ್ಸಿಲ್ ಸಭೆ ನಡೆಸಲು ‌ನಿರ್ಧರಿಸಲಾಗಿದೆ. ಆರು ತಿಂಗಳ ಬಳಿಕ ಈ ಜಿಎಸ್ ಟಿ ಕೌನ್ಸಿಲ್ ಸಭೆ ನಡೆಯುತ್ತಿದ್ದು, ಕೋವಿಡ್ ನಿಂದ ಸಂಕಷ್ಟಕ್ಕೊಳಗಾಗಿರುವ ರಾಜ್ಯಗಳಿಗೆ ಆಶಾಕಿರಣವಾಗಿ ಪರಿಣಮಿಸಿದೆ.

ಇತ್ತ ಲಾಕ್‌ಡೌನ್ ಹೇರಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕರ್ನಾಟಕಕ್ಕೆ ಜಿಎಸ್ ಟಿ ಕೌನ್ಸಿಲ್ ಸಭೆ ದೊಡ್ಡ ಆಶಾ ಕಿರಣವಾಗಿ ಮೂಡಿದೆ. ರಾಜ್ಯದ ಪ್ರತಿನಿಧಿಯಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಕರ್ನಾಟಕ ಹಲವು ಆರ್ಥಿಕ ನೆರವು, ಪರಿಹಾರಗಳ ಬೇಡಿಕೆಯನ್ನು ಮುಂದಿಡಲು ಸಜ್ಜಾಗಿದೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಜೊತೆ ಚರ್ಚಿಸಿ, ಆರ್ಥಿಕ ಇಲಾಖೆಗಳ ಅಧಿಕಾರಿಗಳ ಜೊತೆ ಸಮಾಲೋಚಿಸಿ ಕೌನ್ಸಿಲ್ ಸಭೆಯ ಮುಂದಿಡಬೇಕಾದ ಅಂಶಗಳ ಬಗ್ಗೆ ನಿರ್ಧರಿಸಲಾಗುತ್ತಿದೆ.

ಕೌನ್ಸಿಲ್ ಸಭೆಯಲ್ಲಿ ರಾಜ್ಯದ ಬೇಡಿಕೆಗಳೇನು?:

ಮೇ 28ಕ್ಕೆ ನಡೆಯಲಿರುವ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಕರ್ನಾಟಕ ತನ್ನ ಬೇಡಿಕೆಗಳನ್ನು ಮುಂದಿಡಲಿದೆ. ಲಾಕ್‌ಡೌನ್ ನಿಂದ ಆರ್ಥಿಕವಾಗಿ ಮತ್ತೆ ಹಿಂಜರಿತ ಉಂಟಾಗಿರುವ ಕಾರಣ ಪರಿಹಾರ ನೀಡುವಂತೆ ಪ್ರಮುಖವಾಗಿ ಮನವಿ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ ಕೊನೆ ವಾರದಿಂದ ಹೇರಲಾದ ಲಾಕ್‌ಡೌನ್ ನಿಂದ ರಾಜ್ಯದ ಆದಾಯ ಮೂಲಗಳು ಸಂಪೂರ್ಣ ಬರಿದಾಗಿವೆ. ಜೂನ್ ಮೊದಲ ವಾರದವರೆಗೆ ಲಾಕ್‌ಡೌನ್ ವಿಸ್ತರಿಸಿರುವ ಕಾರಣ ರಾಜ್ಯದ ಬೊಕ್ಕಸ ಸುಮಾರು 10,000 ಕೋಟಿ ರೂ. ಗೂ ಅಧಿಕ ಆದಾಯ ನಷ್ಟ ಅನುಭವಿಸುವ ಆತಂಕವನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಳೆದ ಬಾರಿ ನೀಡಿದಂತೆ ಈ ಬಾರಿಯೂ ಪರಿಹಾರ ನೀಡುವಂತೆ ಸರ್ಕಾರ ಬೇಡಿಕೆ ಇಡಲಿದೆ.

ಕಳೆದ ಬಾರಿ ಲಾಕ್‌ಡೌನ್ ನಿಂದ ಉಂಟಾದ ಆದಾಯ ಕೊರತೆಯ ನಷ್ಟ ಸರಿದೂಗಿಸಲು ರಾಜ್ಯಗಳಿಗೆ ಸಾಲ ಪಡೆಯಲು ವಿಶೇಷ ಗವಾಕ್ಷಿಯನ್ನು ತೆರದಿತ್ತು. ಈ ಯೋಜನೆಯಡಿ ಕೇಂದ್ರ ಸರ್ಕಾರವೇ ರಾಜ್ಯಗಳು ಮಾಡಿದ ಸಾಲವನ್ನು ಮರು ಪಾವತಿಸುವ ಹೊಣೆ ಹೊತ್ತುಕೊಂಡಿತ್ತು. ಆ ಮೂಲಕ ಕರ್ನಾಟಕ 13,000 ಕೋಟಿ ರೂ. ಪಡೆದುಕೊಂಡಿತ್ತು. ಅಂತಹುದೇ ಪರಿಹಾರವನ್ನು ಈ ಬಾರಿಯೂ ಕೇಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಮಾರ್ಚ್ ತಿಂಗಳಲ್ಲಿ ಅತ್ಯಧಿಕ ಜಿಎಸ್ ಟಿ ತೆರಿಗೆ ಸಂಗ್ರಹಿಸಿತ್ತು. ಮಾರ್ಚ್ ತಿಂಗಳಲ್ಲಿ 7,914.98 ಕೋಟಿ ರೂ. ಜಿಎಸ್ ಟಿ ಸಂಗ್ರಹ ಮಾಡಿತ್ತು. ಕಳೆದ ವರ್ಷಕ್ಕೆ ಅದೇ ತಿಂಗಳಿಗೆ ಹೋಲಿಸಿದರೆ ಈ ಬಾರಿ 11% ವೃದ್ಧಿ ಸಾಧಿಸಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಜಿಎಸ್ ಟಿ ಜಾರಿಯಿಂದ ಆಗುವ ಆದಾಯ ಖೋತಾಗೆ ಪರಿಹಾರವಾಗಿ ರಾಜ್ಯ ಎರಡು ತಿಂಗಳಿಗೊಮ್ಮೆ 4,000 ಕೋಟಿ ರೂ.ನಂತೆ ಜಿಎಸ್ ಟಿ ನಷ್ಟ ಪರಿಹಾರ ನೀಡಬೇಕಾಗಿದೆ.

ಕೋವಿಡ್ ಮಧ್ಯೆ ಕರ್ನಾಟಕ ಆರ್ಥಿಕ ಚೇತರಿಕೆ ಕಂಡಿರುವ ಬಗ್ಗೆ ಅಧಿಕಾರಿಗಳು ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸಲಿದ್ದು, ಹೆಚ್ಚಿನ ಪರಿಹಾರ ನೀಡುವಂತೆ ಬೇಡಿಕೆ ಇಡಲಿದ್ದಾರೆ. ಇದರ ಜೊತೆಗೆ ಕರ್ನಾಟಕ ಜಿಎಸ್ ಟಿ ತೆರಿಗೆ ವಿನಾಯಿತಿ ನೀಡುವ ಸಂಬಂಧವೂ ಕೌನ್ಸಿಲ್ ಸಭೆಯಲ್ಲಿ ಒತ್ತಾಯಿಸಲಿದೆ.

ಪ್ರಮುಖವಾಗಿ ಕೋವಿಡ್ ಸಂಬಂಧಿತ ಔಷಧ, ಸಲಕರಣೆಗಳಿಗೆ ಜಿಎಸ್ ಟಿ ತೆರಿಗೆ ವಿನಾಯಿತಿ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ರೆಮ್ಡಿಸಿವಿರ್, ಕೋವಿಡ್ ಲಸಿಕೆ, ವೆಂಟಿಲೇಟರ್ ಇತರ ಉಪಕರಣಗಳಿಗೆ ಜಿಎಸ್ ಟಿ ತೆರಿಗೆಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಲಿದೆ. ಪಿಪಿಇ ಕಿಟ್, ಸ್ಯಾನಿಟೈಸರ್, ಮಾಸ್ಕ್, ಆಕ್ಸಿಮೀಟರ್ ಗಳ ಮೇಲಿನ ಜಿಎಸ್ ಟಿ ತೆರಿಗೆಯಿಂದಲೂ ವಿನಾಯಿತಿ ನೀಡಲು ರಾಜ್ಯ ಸರ್ಕಾರ ಒತ್ತಾಯಿಸಲಿದೆ.

ಕೋವಿಡ್ ಸಂಬಂಧ ಪರಿಹಾರಾರ್ಥವಾಗಿ ಹೊರ ದೇಶಗಳಿಂದ ಬರುವ ಔಷಧ, ಉಪಕರಣಗಳಿಗೂ ತೆರಿಗೆ ವಿನಾಯಿತಿ ನೀಡಲು ಮನವಿ ಮಾಡುವ ಸಾಧ್ಯತೆ ಇದೆ ಎಂದು ರಾಜ್ಯ ಸರ್ಕಾರದ ಜಿಎಸ್ ಟಿ ಸಲಹಾ ಸಮಿತಿ ಸದಸ್ಯ ಬಿ.ಟಿ. ಮನೋಹರ್ ತಿಳಿಸಿದ್ದಾರೆ. ಉಳಿದಂತೆ ಸಣ್ಣ ಕೈಗಾರಿಕೆಗಳ ಬೇಡಿಕೆಯಂತೆ ರಾಜ್ಯ ಸರ್ಕಾರ ಜಿಎಸ್ ಟಿ ಕೌನ್ಸಿಲ್ ಸಭೆ ಮುಂದೆ ಜಿಎಸ್ ಟಿ ಪಾವತಿ ಡೆಡ್​ಲೈನ್ ಮುಂದೂಡುವಂತೆ, ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಯನ್ನು ಜೂನ್ ಗೆ ಮುಂದೂಡುವಂತೆ ಮನವಿ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

For All Latest Updates

ABOUT THE AUTHOR

...view details