ಕರ್ನಾಟಕ

karnataka

ETV Bharat / city

ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತ: ವಿಚಾರಣಾಧಿಕಾರಿ ವಿಮುಕ್ತಿಗೊಳಿಸಿ ರಾಜ್ಯ ಸರ್ಕಾರದ ಆದೇಶ - ಜಿಲ್ಲಾಸ್ಪತ್ರೆ ದುರಂತ

ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತದ ವಿಚಾರಣಾಧಿಕಾರಿಯಾಗಿ ನೇಮಕಗೊಂಡಿದ್ದ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಅವರನ್ನು 10 ದಿನಗಳ ನಂತರ ಕರ್ತವ್ಯದಿಂದ ವಿಮುಕ್ತಿಗೊಳಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ.

ವಿಚಾರಣಾಧಿಕಾರಿ
ವಿಚಾರಣಾಧಿಕಾರಿ

By

Published : May 13, 2021, 10:55 PM IST

ಬೆಂಗಳೂರು:ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತದ ವರದಿ ನೀಡುವ ಬಗ್ಗೆ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ನಿಯೋಜಿಸಿದ್ದ ಸರ್ಕಾರವೇ ವಿಚಾರಣಾಧಿಕಾರಿ ಕರ್ತವ್ಯದಿಂದ ವಿಮುಕ್ತಿಗೊಳಿಸಿ ಆದೇಶಿಸಿದೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ 3ರಂದು ಆಕ್ಸಿಜನ್ ಕೊರತೆಯಿಂದ 23 ಸೋಂಕಿತರು ಮೃತಪಟ್ಟಿದ್ದರು. ಸಾವಿಗೆ ಕಾರಣವಾದ ಹಿನ್ನೆಲೆ ಪತ್ತೆಹಚ್ಚಿ ಸರ್ಕಾರಕ್ಕೆ ವರದಿ ನೀಡಲು ರಾಜ್ಯ ಸರ್ಕಾರ ಕೆಎಸ್ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಅವರನ್ನು ನೇಮಿಸಿತ್ತು. ಅದರಂತೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಪಡೆದಿದ್ದರು. ಮೂರು ದಿನದಲ್ಲಿ ವರದಿ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದರು.

ಇದೇ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಲು ಒಳಾಡಳಿತ ಇಲಾಖೆ ಹಾಗೂ ಹೈಕೋಟ್೯ ತನಿಖಾ ಆಯೋಗ ನೇಮಿಸಿತ್ತು. ಆದರೆ, ಸರ್ಕಾರವು ಕಳಸದ್ ವರದಿ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ. ತನಿಖೆ ನಡೆಸಬೇಕೇ ಇಲ್ಲವೇ ಎಂಬ ಬಗ್ಗೆ ಸ್ಪಷ್ಟನೆ ನೀಡರಲಿಲ್ಲ. ಈ ಸಂಬಂಧ ಶಿವಯೋಗಿ ಕಳಸದ್ ಸರ್ಕಾರಕ್ಕೆ ಪತ್ರ ಬರೆದಿದ್ದರು.

ABOUT THE AUTHOR

...view details