ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತುಸೇವೆಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೊರೊನಾ ಸೋಂಕಿತರಿಗಿಂತ ಶಂಕಿತರ ಸಂಖ್ಯೆಯೇ ಹೆಚ್ಚಾಗಿರುವ ಕಾರಣ ಆ್ಯಂಬುಲೆನ್ಸ್ಗಳನ್ನು ಇದೇ ಪ್ರಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಆ್ಯಂಬುಲೆನ್ಸ್ಗಳ ಕೊರತೆ...ಓಲಾ, ಊಬರ್ ಬಳಕೆಗೆ ಮುಂದಾದ ರಾಜ್ಯ ಸರ್ಕಾರ - State government decided to use Uber
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿಯೇ ಹೊರತು ಕಡಿಮೆಯಾಗುತ್ತಿಲ್ಲ. ಈ ಸಮಯದಲ್ಲಿ ಆ್ಯಂಬುಲೆನ್ಸ್ ಕೊರತೆ ಕೂಡಾ ಉಂಟಾಗಿದೆ. ಆದ್ದರಿಂದ ಸರ್ಕಾರ ಇನ್ನಿತರ ಅಗತ್ಯ ಸೇವೆಗಳಿಗೆ ಓಲಾ ಹಾಗೂ ಊಬರ್ ಟ್ಯಾಕ್ಸಿ ಸೇವೆ ಬಳಸಿಕೊಳ್ಳಲು ನಿರ್ಧರಿಸಿದೆ.
ಈಗ ಬೆಂಗಳೂರು ನಗರದಲ್ಲಿ ಇರುವ 108 ಆ್ಯಂಬುಲೆನ್ಸ್ ವ್ಯವಸ್ಥೆ ಕೇವಲ ಕೊರೊನಾ ವೈರಸ್ ರೋಗಿಗಳಿಗೆ ಬಳಕೆಯಾಗುತ್ತಿದೆ. ಇದರಿಂದ ತುರ್ತು ವೈದ್ಯಕೀಯ ಸೇವೆಗೆ ತೊಂದರೆ ಆಗುತ್ತಿದೆ. ಹೀಗಾಗಿ 108 ಆ್ಯಂಬುಲೆನ್ಸ್ಗಳನ್ನು ಸದ್ಯದ ಮಟ್ಟಿಗೆ ಕೊರೊನಾ ರೋಗಿಗಳಿಗೆ ಮಾತ್ರ ಮೀಸಲಿರಿಸಿ, ಇತರೆ ಅಗತ್ಯ ಸೇವೆಗಳಿಗೆ ಓಲಾ ಮತ್ತು ಊಬರ್ ಸೇವೆ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಸರ್ಕಾರ 100 ಓಲಾ ಹಾಗೂ 100 ಊಬರ್ ವ್ಯವಸ್ಥೆ ಮಾಡಿದೆ. ಈ ವಾಹನಗಳನ್ನು ಆರೋಗ್ಯ ಸಚಿವ ಶ್ರೀರಾಮುಲು ಸಾಂಕೇತಿಕವಾಗಿ ಉದ್ಘಾಟಿಸಲಿದ್ದಾರೆ. ಈ ಮೂಲಕ ಜನರಿಗೆ ಸೇವೆ ನೀಡಲು ಸರ್ಕಾರ ಹೊಸ ಪ್ಲ್ಯಾನ್ ಮಾಡಿದಂತಾಗಿದೆ.