ಬೆಂಗಳೂರು :2020ನೇ ಸಾಲಿನ 15 ದಿನಗಳ ಗಳಿಕೆ ರಜೆಯ ನಗದೀಕರಣವನ್ನ ರದ್ದು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ವರ್ಷ ಪೇಯ್ಡ್ ಲೀವ್ ಸೌಲಭ್ಯದಿಂದಲೂ ವಂಚಿತರಾದ ಸರ್ಕಾರಿ ನೌಕರರು.. ಆದರೆ, - ಬೆಂಗಳೂರು ಸುದ್ದಿ
ಕಳೆದ 40 ದಿನಗಳಿಂದ ದೇಶದಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಆದ್ದರಿಂದ ರಾಜ್ಯದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಸರ್ಕಾರ ಸದ್ಯ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ ಈ ತೀರ್ಮಾನಕ್ಕೆ ಬಂದಿದೆ.
![ಈ ವರ್ಷ ಪೇಯ್ಡ್ ಲೀವ್ ಸೌಲಭ್ಯದಿಂದಲೂ ವಂಚಿತರಾದ ಸರ್ಕಾರಿ ನೌಕರರು.. ಆದರೆ, State government cancels Government paid leave](https://etvbharatimages.akamaized.net/etvbharat/prod-images/768-512-7077726-thumbnail-3x2-news.jpg)
ಈ ವರ್ಷ ಪೇಯ್ಡ್ ಲೀವ್ ಸೇವೆಯಿಂದ ವಂಚಿತರಾದ ಸರ್ಕಾರಿ ನೌಕರರು..!
ಪ್ರತಿ ಸರ್ಕಾರಿ ನೌಕರರು ವರ್ಷದಲ್ಲಿ15 ಪೇಯ್ಡ್ ಲೀವ್ ಪಡೆಯಬಹುದಾಗಿತ್ತು. ಇದರಿಂದ ರಜೆ ತೆಗೆದುಕೊಂಡರೂ ಸಂಬಳದಲ್ಲಿ ಹಣ ಕಟ್ ಆಗುತ್ತಿರಲಿಲ್ಲ. ಆದರೆ,ಈ ವರ್ಷ ಸರ್ಕಾರಿ ನೌಕರರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕಳೆದ 40 ದಿನಗಳಿಂದ ದೇಶದಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಆದ್ದರಿಂದ ರಾಜ್ಯದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಸರ್ಕಾರ ಸದ್ಯ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ ಈ ತೀರ್ಮಾನಕ್ಕೆ ಬಂದಿದೆ. ಆದರೆ, ಡಿಸೆಂಬರ್ ತಿಂಗಳಲ್ಲಿ ನಿವೃತ್ತಿ ಹೊಂದುವ ನೌಕರರು ಮಾತ್ರ ರಜೆಯ ನಗದೀಕರಣ ಸೌಲಭ್ಯ ಪಡೆಯಬಹುದಾಗಿದೆ.