ಬೆಂಗಳೂರು :ಇತ್ತೀಚೆಗೆ ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯ ವಿಚಾರವಾಗಿ ರೋಹಿತ್ ಚಕ್ರತೀರ್ಥ ಸಮಿತಿಯನ್ನು ಕೈಬಿಡವಂತೆ ಒತ್ತಾಯಿಸಿ ಭಾರಿ ವಿವಾದಗಳಾಗಿದ್ದವು. ರಾಜ್ಯ ಸರ್ಕಾರ ಸಮಿತಿಯನ್ನು ವಿಸರ್ಜಿಸಿ ವಿವಾದಕ್ಕೆ ತಣ್ಣಗಾಗಿಸಲೆತ್ನಿಸಿತ್ತು. ಆದ್ರೀಗ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿದ್ದ ತಪ್ಪುಗಳನ್ನು ಸರಿಪಡಿಸಲು ಮತ್ತೊಂದು ಸಮಿತಿ ರಚನೆಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಇದು ಮತ್ತೆ ರಾಜ್ಯದಲ್ಲಿ ವಿವಾದದ ಕಿಡಿ ಹೊತ್ತಿಸಿದೆ.
ಹೊಸ ಸಮಿತಿಯಲ್ಲಿ ಶಿಕ್ಷಣ ತಜ್ಞರು, ಚಿಂತಕರು, ಸಾಹಿತಿಗಳು, ಯಾರಿಗೂ ಮಣೆ ಹಾಕದೆ ಶಿಕ್ಷಣ ಇಲಾಖೆ ಪ್ರಾಂಶುಪಾಲರು ಹಾಗೂ ನುರಿತ ಶಿಕ್ಷಕರ ನೇತೃತ್ವದಲ್ಲಿ ಎಡವಟ್ಟು ಸರಿಪಡಿಸುವ ಕಾರ್ಯಕ್ಕೆ ಶಿಕ್ಷಣ ಇಲಾಖೆ ಕೈ ಹಾಕಿದೆ.