ಬೆಂಗಳೂರು:ಹಿರಿಯರ ಮನೆ, ಚಿಂತಕರ ಚಾವಡಿಯಾಗಿದ್ದ ವಿಧಾನ ಪರಿಷತ್ ಇದೀಗ ಗೂಂಡಾಗಳ ರಕ್ಷಣಾ ತಂಗುದಾಣದಂತಾಗಿದೆ. ಹೀಗಾಗಿ ಕೂಡಲೇ ಪರಿಷತ್ ರದ್ದುಪಡಿಸುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ ಹಿರಿಯರ ಮನೆಯಾಗಿ ಉಳಿದಿಲ್ಲ, ಗೂಂಡಾಗಳ ರಕ್ಷಣಾ ತಾಣವಾಗಿದೆ. ಪರಿಷತ್ನಲ್ಲಿ ನಡೆದ ಘಟನೆಯಿಂದಾಗಿ ರಾಜ್ಯದ ಜನರು ತಲೆತಗ್ಗಿಸುವಂತಾಗಿದೆ. ಹಣಬಲದಿಂದ ಸ್ಥಾನ ಖರೀದಿಸಿ ಕಾನೂನು ರಕ್ಷಣೆ ಪಡೆಯುವಂತಾಗಿದೆ. ಇಂತಹ ವಿಧಾನ ಪರಿಷತ್ ನಮ್ಮ ರಾಜ್ಯಕ್ಕೆ ಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ.