ಕರ್ನಾಟಕ

karnataka

ETV Bharat / city

ಬಡವರ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳಿಲ್ಲ ಕಾಳಜಿ: ಕೈ ಟ್ವೀಟ್​ ವಾಗ್ದಾಳಿ - ವಿದ್ಯುತ್​ ಕಾಯ್ದೆ

2003ರ ವಿದ್ಯುತ್ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ರಾಜ್ಯ ಕಾಂಗ್ರೆಸ್​ ತನ್ನ ಅಧಿಕೃತ ಟ್ವಿಟರ್​​​​​ ಖಾತೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.

congress
ಕಾಂಗ್ರೆಸ್

By

Published : Jun 3, 2020, 1:49 PM IST

ಬೆಂಗಳೂರು:ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಟ್ವಿಟರ್​​​ ಮೂಲಕ ತನ್ನ ಬೇಸರ ಹೊರಹಾಕಿರುವ ಕಾಂಗ್ರೆಸ್ ಪಕ್ಷ, ''2003ರ ವಿದ್ಯುತ್ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ತಿದ್ದುಪಡಿಯಿಂದಾಗಿ ಕೆಲವೇ ಕೆಲವು ವ್ಯಕ್ತಿಗಳ ನಿಯಂತ್ರಣಕ್ಕೆ ವಿದ್ಯುತ್‌ ಕ್ಷೇತ್ರ ಒಳಪಡುತ್ತದೆ. ವಿದ್ಯುತ್‌ ದರ ನಿಗದಿಯೂ ಅವರ ಇಚ್ಛೆಯಂತೆಯೇ ನಡೆದು, ದರ ಅಧಿಕವಾಗುತ್ತದೆ. ಈ ಜನವಿರೋಧಿ ತಿದ್ದುಪಡಿಯನ್ನು ರಾಜ್ಯ ಬಿಜೆಪಿ ಸರ್ಕಾರ ಸ್ಪಷ್ಟವಾಗಿ ವಿರೋಧಿಸಬೇಕು'' ಎಂದಿದೆ.

ಕಾಂಗ್ರೆಸ್​​ ಟ್ವೀಟ್​


ಇದರ ಜೊತೆಗೆ ಬಿಜೆಪಿ ಸರ್ಕಾರದ ಘೋಷಣೆ ಪ್ರಚಾರಕ್ಕಾಗಿಯೇ ಹೊರತು ರೈತರು ಹಾಗೂ ಬಡವರ ಹಿತಕ್ಕಾಗಿ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳುತ್ತಲೇ ರೈತರ ಬೆವರಿನ ದುಡಿಮೆಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ABOUT THE AUTHOR

...view details