ಕರ್ನಾಟಕ

karnataka

ETV Bharat / city

ಕಮಲ ಕಲಹ: ಕಾದು ನೋಡುವ ತಂತ್ರಗಾರಿಕೆಯ ಮೊರೆ ಹೋದ ರಾಜ್ಯ ಕಾಂಗ್ರೆಸ್​​ ನಾಯಕರು - bjp rebal MLA movements

ಬಿಜೆಪಿ ಪಾಳಯದಲ್ಲಿ ನಡೆಯುತ್ತಿರುವ ಅಂತರಿಕ ಕಲಹವನ್ನು ಮತ್ತು ಬಂಡಾಯ ಶಾಸಕರ ನಡೆಯನ್ನು ಕೈ ನಾಯಕರು ಗಮನಿಸುತ್ತಿದ್ದಾರೆ. ಒಂದು ವೇಳೆ ಬಂಡಾಯ ತೀವ್ರವಾದರೆ ಮಾತ್ರ ಬಳಿಕ ಅಖಾಡಕ್ಕೆ ಇಳಿಯಲು ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.

ರಾಜ್ಯ ಕಾಂಗ್ರೆಸ್
ರಾಜ್ಯ ಕಾಂಗ್ರೆಸ್

By

Published : May 29, 2020, 11:36 AM IST

ಬೆಂಗಳೂರು: ಇತ್ತ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಅತ್ತ ರಾಜ್ಯ ಕಾಂಗ್ರೆಸ್ ನಾಯಕರು ಕಾದು ನೋಡುವ ತಂತ್ರಗಾರಿಕೆಯ ಮೊರೆ ಹೋಗಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್​​ ಸಮಿತಿ ಕಾರ್ಯಾಲಯ

ಬಿಜೆಪಿ ಪಾಳಯದಲ್ಲಿ ನಡೆಯುತ್ತಿರುವ ಅಂತರಿಕ ಕಲಹವನ್ನು ರಾಜ್ಯ ಕಾಂಗ್ರೆಸ್​ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಂಡಾಯ ಶಾಸಕರ ನಡೆಯನ್ನು ಕೈ ನಾಯಕರು ಗಮನಿಸುತ್ತಿದ್ದಾರೆ. ಒಂದು ವೇಳೆ ಬಂಡಾಯ ತೀವ್ರವಾದರೆ ಮಾತ್ರ ಬಳಿಕ ಅಖಾಡಕ್ಕೆ ಇಳಿಯಲು ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಈಗಾಗಲೇ ಬಿಜೆಪಿ ಬಂಡಾಯ ಶಾಸಕರ ಪ್ರತಿ ನಡೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಿಜೆಪಿಯಲ್ಲಿನ ಬಂಡಾಯ ಇನ್ನಷ್ಟು ತೀವ್ರವಾದರೆ ಅದರಿಂದ ಕಾಂಗ್ರೆಸ್​ಗೆ ಸಹಜವಾಗಿಯೇ ಲಾಭ ಆಗಲಿದೆ. ಕೊರೊನಾ ಸಂದರ್ಭದಲ್ಲಿ ಬಿಜೆಪಿಯಲ್ಲಿನ ತಿಕ್ಕಾಟ ಪರೋಕ್ಷವಾಗಿ ಕಾಂಗ್ರೆಸ್​ಗೆ ಅನುಕೂಲವಾಗಲಿದೆ ಎಂಬುದು ಕೈ ನಾಯಕರ ಅಭಿಪ್ರಾಯವಾಗಿದೆ.

ಸದ್ಯಕ್ಕೆ ಕಾದು ನೋಡುವ ತಂತ್ರಗಾರಿಕೆಯಲ್ಲಿರುವ ಕೈ ನಾಯಕರು, ಪ್ರಸಕ್ತ ಬಿಜೆಪಿಯ ಆಂತರಿಕ ರಾಜಕೀಯ ಕಚ್ಚಾಟದಲ್ಲಿ ಎಂಟ್ರಿ ಕೊಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದು, ಕಮಲ‌ ಕಲಹ ಅತಿರೇಕಕ್ಕೆ ಹೋದರೆ ಮಾತ್ರ ತಮ್ಮ ಕಾರ್ಯತಂತ್ರ ರೂಪಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details