ಕರ್ನಾಟಕ

karnataka

ETV Bharat / city

ರೋಗ ಲಕ್ಷಣಗಳಿದ್ರೆ ಕೊರೊನಾ ಟೆಸ್ಟ್ ಫಲಿತಾಂಶಕ್ಕೂ ಮುನ್ನವೇ ಚಿಕಿತ್ಸೆ ಆರಂಭಿಸಿ: ಸರ್ಕಾರ ಆದೇಶ - ಕರ್ನಾಟಕ ಕೊರೊನಾ ಅಪ್​ಡೇಟ್

ಕೋವಿಡ್ ಪರೀಕ್ಷೆ ವೇಳೆ ರೋಗ ಲಕ್ಷಣಗಳು ಇದ್ದಲ್ಲಿ ಅಲ್ಲಿನ ಲ್ಯಾಬ್ ಅಥವಾ ಆಸ್ಪತ್ರೆ ಸಿಬ್ಬಂದಿ ಕೋವಿಡ್ ಶಂಕಿತರಿಗೆ ಹಾಗೂ ಅವರ ಸಂಪರ್ಕಿತರಿಗೆ ಔಷಧಿ ನೀಡಲು ಸೂಚನೆ ನೀಡಿದೆ.

vaccine
vaccine

By

Published : May 7, 2021, 2:42 AM IST


ಬೆಂಗಳೂರು: ರಾಜ್ಯದಲ್ಲಿ ಶೇ.30 ರಷ್ಟು ಕೋವಿಡ್-19 ಪಾಸಿಟಿವಿಟಿ ಪ್ರಮಾಣವಿದೆ. ಕೊರೊನಾ ಪರೀಕ್ಷೆ ಫಲಿತಾಂಶ ಬರಲು ತಡವಾಗುತ್ತಿರುವ ಹಿನ್ನೆಲೆಯಲ್ಲಿ ರೋಗ ಲಕ್ಷಣ ಇದ್ದರೆ ಕೂಡಲೇ ಔಷಧಿ ನೀಡಲು ಸರ್ಕಾರ ಆದೇಶ ಹೊರಡಿಸಿದೆ.

ಕೋವಿಡ್ ಪರೀಕ್ಷೆ ವೇಳೆ ರೋಗ ಲಕ್ಷಣಗಳು ಇದ್ದಲ್ಲಿ ಅಲ್ಲಿನ ಲ್ಯಾಬ್ ಅಥವಾ ಆಸ್ಪತ್ರೆ ಸಿಬ್ಬಂದಿ ಕೋವಿಡ್ ಶಂಕಿತರಿಗೆ ಹಾಗೂ ಅವರ ಸಂಪರ್ಕಿತರಿಗೆ ಔಷಧಿ ನೀಡಲು ಸೂಚನೆ ನೀಡಿದೆ.

ಸರ್ಕಾರದ ಆದೇಶ ಪ್ರತಿ
ವಿಟಮಿನ್ ಸಿ, ಜಿಂಕ್ ಮಾತ್ರೆ ಹಾಗೂ ಐವರ್ಸ್ ಮೆಟಿನ್ ನೀಡಲು ಆರೋಗ್ಯ ಇಲಾಖೆ ಹೇಳಿದ್ದು, ಪಾಸಿಟಿವ್ ಬಂದರೆ ಮುಂದಿನ ಚಿಕಿತ್ಸೆ ಮುಂದುವರೆಸಲು ಸೂಚಿಸಿದೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಆತಂಕಗೊಂಡಿದ್ದಾರೆ. (ಗಂಗಾವತಿಯಲ್ಲಿ ಲಸಿಕೆ ಕೊರತೆ... ಜನರ ಪರದಾಟ)

ABOUT THE AUTHOR

...view details