ಕರ್ನಾಟಕ

karnataka

ETV Bharat / city

ಇನ್ಮುಂದೆ ಸಚಿವಾಲಯದ ಸಿಬ್ಬಂದಿ ಆನ್‌ಲೈನ್​​ ‌ಮೂಲಕ ರಜೆಗೆ ಮನವಿ ಸಲ್ಲಿಸುವುದು ಕಡ್ಡಾಯ! - ಯೂಸರ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಲಾಗ್ ಇನ್

ಹೊಸ ವರ್ಷದಿಂದ ಸಚಿವಾಲಯದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಆನ್​​ಲೈನ್ ರಜೆ ನಿರ್ವಹಣಾ ವ್ಯವಸ್ಥೆ ಜಾರಿಗೆ ತರಲಾಗಿದೆ.

KN_BNG_07_ONLINE_LEAVEAPPLICATION_SCRIPT_7201951
ಇನ್ಮುಂದೆ ಸಚಿವಾಲಯದ ಸಿಬ್ಬಂದಿ ಆನ್‌ಲೈನ್ ‌ಮೂಲಕ ರಜೆಗೆ ಮನವಿ ಸಲ್ಲಿಸುವುದು ಕಡ್ಡಾಯ!

By

Published : Dec 24, 2019, 11:58 PM IST

ಬೆಂಗಳೂರು:ಹೊಸ ವರ್ಷದಿಂದ ಸಚಿವಾಲಯದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಆನ್​​ಲೈನ್ ರಜೆ ನಿರ್ವಹಣಾ ವ್ಯವಸ್ಥೆ ಜಾರಿಗೆ ತರಲಾಗಿದೆ.

ಸಚಿವಾಲಯದ ಸಿಬ್ಬಂದಿ ಹಾಗೂ ಅಧಿಕಾರಿಗಳು ರಜೆ ಪಡೆಯುವ ಹಾಗೂ ಅಂಗೀಕಾರ ವಿಧಾನವನ್ನು ಆನ್‌ಲೈನ್ ಮಾಡಲಾಗಿದೆ. ಸಚಿವಾಲಯದ ಎಲ್ಲಾ ಗ್ರೂಪ್ ಎ, ಬಿ, ಸಿ ವೃಂದದ ಅಧಿಕಾರಿ ಮತ್ತು ನೌಕರರಿಗೆ ಇ-ಲೀವ್ ತಂತ್ರಾಂಶವನ್ನು ಹೊಸ ವರ್ಷದಿಂದ ಕಡ್ಡಾಯವಾಗಿ ಜಾರಿಗೆ ತರಲಾಗಿದೆ. ಅದರ ಪ್ರಕಾರ ಸಚಿವಾಲಯದ ನೌಕರರು ಈಗಾಗಲೇ ನೀಡಲಾಗಿರುವ ಯೂಸರ್ ಐಡಿ ಮತ್ತು ಪಾಸ್​​ವರ್ಡ್ ಬಳಸಿ ಲಾಗ್ ಇನ್ ಆಗಿ ರಜೆ ನಿರ್ವಹಣಾ ವ್ಯವಸ್ಥೆಯಲ್ಲೇ ರಜೆ ಮನವಿ ಸಲ್ಲಿಸಬೇಕು. ರಜೆ ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸರ್ಕಾರ ಈ ಇ-ಲೀವ್ ತಂತ್ರಾಂಶವನ್ನು ಜಾರಿಗೆ ತರಲಾಗಿದೆ.

For All Latest Updates

ABOUT THE AUTHOR

...view details