ಕರ್ನಾಟಕ

karnataka

ETV Bharat / city

Bitcoin Scam : 'ತನಿಖಾವಧಿಯಲ್ಲಿ ನನ್ನ ಮಗನಿಗೆ ಡ್ರಗ್ಸ್​ ನೀಡಿದ್ದಾರೆ'.. ಪೊಲೀಸರ ವಿರುದ್ಧ 'ಶ್ರೀಕಿ' ತಂದೆ ಆರೋಪ - ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ತಂದೆ

ಬಿಟ್ ಕಾಯಿನ್ (Karnataka Bitcoin scam) ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಗೆ (Sri Krishna Alias Sriki) ತನಿಖಾ ಅವಧಿಯಲ್ಲಿ ಡ್ರಗ್ಸ್ (Drugs) ನೀಡಿದ್ದರು ಎಂದು ಆರೋಪಿಸಿ ಶ್ರೀಕಿ ತಂದೆಯೇ ಕೋರ್ಟ್ ಮೆಟ್ಟಿಲೇರಿದ್ದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ..

ಪೊಲೀಸರ ವಿರುದ್ಧ 'ಶ್ರೀಕಿ' ತಂದೆ ಆರೋಪ
ಪೊಲೀಸರ ವಿರುದ್ಧ 'ಶ್ರೀಕಿ' ತಂದೆ ಆರೋಪ

By

Published : Nov 12, 2021, 7:18 PM IST

ಬೆಂಗಳೂರು:ಬಿಟ್ ಕಾಯಿನ್ ಹಗರಣ (Karnataka Bitcoin scam) ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ರಾಷ್ಟ್ರಮಟ್ಟದಲ್ಲಿಯೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಬೆಳವಣಿಗೆ ಮಧ್ಯೆಯೇ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಗೆ (Sri Krishna Alias Sriki) ತನಿಖಾ ಅವಧಿಯಲ್ಲಿ ಡ್ರಗ್ಸ್ (Drugs) ನೀಡಿದ್ದರು ಎಂದು ಆರೋಪಿಸಿ ಶ್ರೀಕಿ ತಂದೆಯೇ ಕೋರ್ಟ್ ಮೆಟ್ಟಿಲೇರಿದ್ದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಜಯನಗರ ನಿವಾಸಿ ಹ್ಯಾಕರ್ ಶ್ರೀಕೃಷ್ಣನ (Hacker Srikrishna) ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು(Central Crime Branch) ಕಳೆದ ವರ್ಷ ಬಂಧಿಸಿದ್ದರು. ವಿಚಾರಣೆ ವೇಳೆ ಬಿಟ್ ಕಾಯಿನ್ ದಂಧೆಯಲ್ಲಿ (Karnataka Bitcoin scam) ಭಾಗಿಯಾಗಿ ಕೋಟ್ಯಂತರ ರೂಪಾಯಿ ಹಣ ಹ್ಯಾಕ್ ಮಾಡಿದ ಎಂಬುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು.

ಕಳೆದ ವರ್ಷ ಡಿ. 28ರಿಂದ ಜ.11ರವರೆಗೆ ಪೊಲೀಸ್ ಕಸ್ಟಡಿಯಲ್ಲಿರುವಾಗ (Police Custody) ನನ್ನ ಮಗ ಶ್ರೀಕಿಗೆ ಮಾದಕವಸ್ತು ನೀಡಿ ಒತ್ತಾಯಪೂರ್ವಕವಾಗಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿ ಆರೋಪಿಯ ತಂದೆ ಗೋಪಾಲ್ ರಮೇಶ್ ನ್ಯಾಯಾಲಯ (Court) ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಬಲವಂತವಾಗಿ ಡ್ರಗ್ಸ್ (Drugs) ನೀಡಿ ತಮಗೆ ಬೇಕಾದ ರೀತಿಯಲ್ಲಿ ಪೊಲೀಸರು ಹೇಳಿಕೆ (Police Statement) ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕೋರ್ಟ್ ಕಟಕಟೆ ಮುಂದೆ ಪೊಲೀಸರು ಡ್ರಗ್ಸ್ ನೀಡಿದ್ದರು ಎಂದು ಶ್ರೀಕಿ ಹೇಳಿದ್ದ ಎನ್ನಲಾಗಿದೆ. ಈ ಸಂಬಂಧ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗೋಪಾಲ್ ಮನವಿ ಮಾಡಿದ್ದಾರೆಂದು ಮಾಹಿತಿ ಲಭ್ಯವಾಗಿದೆ.

ಇದಕ್ಕೆ ಉತ್ತರವಾಗಿ ವಿಚಾರಣೆ ವೇಳೆ ಡ್ರಗ್ಸ್ ನೀಡಿಲ್ಲ ಎಂದು ಪೊಲೀಸರು ನ್ಯಾಯಾಲಯದ ಮುಂದೆ ಉತ್ತರಿಸಿದ್ದರು. ಈ ಸಂಬಂಧ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯವು ಆರೋಪಿ ಶ್ರೀಕೃಷ್ಣನಿಗೆ ಮೂತ್ರ ಹಾಗೂ ರಕ್ತ ಮಾದರಿ ಪರೀಕ್ಷೆ (Blood and Urine Test) ನಡೆಸಿ ವರದಿ ನೀಡುವಂತೆ ಪೊಲೀಸರಿಗೆ ಹೇಳಿತ್ತು.

ಓದಿ: ಬಿಟ್​ ಕಾಯಿನ್​​ ದಾಖಲೆ ಸಂಗ್ರಹ 100 ಪರ್ಸೆಂಟ್, ಸೂಕ್ತ ಸಮಯದಲ್ಲಿ ಬಿಡುಗಡೆ : ಡಿಕೆಶಿ

ABOUT THE AUTHOR

...view details