ಬೆಂಗಳೂರು:ದಿಶಾ ರವಿ ಬಂಧನ ಪ್ರಕರಣವನ್ನು ದೆಹಲಿ ಪೊಲೀಸರು ನ್ಯಾಯಸಮ್ಮತವಾಗಿ ತನಿಖೆ ನಡೆಸಬೇಕು. ನಿಜವಾಗಿಯೂ ಆಕೆ ಖಲಿಸ್ತಾನಿ ಗುಂಪುಗಳ ಜತೆ ಸೇರಿದ್ದರೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ದೆಹಲಿ ಪೊಲೀಸರು ಆದಷ್ಟು ಬೇಗ ದಿಶಾ ರವಿ ಬಂಧನದ ಕೇಸ್ನ ತನಿಖೆ ಮುಗಿಸಿ, ಆಕೆಗೆ ಖಲಿಸ್ತಾನಿ ಹೋರಾಟಗಾರರ ಜತೆ ಯಾವುದೇ ಸಂಪರ್ಕ ಇರದಿದ್ದರೆ ಆಕೆಯನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ರೈತ ಹೋರಾಟದ ಬೆಂಬಲಕ್ಕೆ ನಿಂತ ಯಾರನ್ನೂ ದುರುದ್ದೇಶದಿಂದ ಟಾರ್ಗೆಟ್ ಮಾಡಬಾರದು ಎಂದರು.
ದಿಶಾ ರವಿ ಬಂಧನ ಪ್ರಕರಣವನ್ನು ದೆಹಲಿ ಪೊಲೀಸರು ನ್ಯಾಯಸಮ್ಮತವಾಗಿ ತನಿಖೆ ನಡೆಸಬೇಕು. ನಿಜವಾಗಿಯೂ ಆಕೆ ಖಲಿಸ್ತಾನಿ ಗುಂಪುಗಳ ಜತೆ ಸೇರಿದ್ದರೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ಆದರೆ ರೈತರಿಗೆ ಬೆಂಬಲ ಕೊಟ್ಟಿದ್ದಾರೆ ಅನ್ನೋ ಒಂದೇ ಕಾರಣಕ್ಕೆ ದಿಶಾ ರವಿ ಅವರನ್ನು ದೇಶದ್ರೋಹದ ಪ್ರಕರಣದಲ್ಲಿ ಸಿಲುಕಿಸಬಾರದು. ರೈತ ಹೋರಾಟಕ್ಕೆ ಬೆಂಬಲ ನೀಡಿದ್ದಕ್ಕೆ ಬೆಂಗಳೂರಿನ ದಿಶಾ ರವಿ ಎಂಬ ಪರಿಸರ ಹೋರಾಟಗಾರ್ತಿಯನ್ನು ದೆಹಲಿ ಪೊಲೀಸರು ಬಂಧಿಸಿ ಆಕೆಯ ಮೇಲೆ ದೇಶದ್ರೋಹದ ಕೇಸ್ ಹಾಕಿದ್ದಾರೆ. ಈ ಬೆಳವಣಿಗೆ ಜನಸಮೂಹದಲ್ಲಿ ಸಂಶಯ ಬರುವಂತಾಗಿದೆ. ದುರುದ್ದೇಶದಿಂದ ದೇಶದ್ರೋಹದ ಕೇಸ್ನಲ್ಲಿ ಆಕೆಯನ್ನು ಸಿಲುಕಿಸುವ ಪ್ರಯತ್ನವನ್ನು ಪೊಲೀಸರು ಮಾಡಬಾರದು ಎಂದು ಹೇಳಿದ್ದಾರೆ.