ಕರ್ನಾಟಕ

karnataka

ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆ ಕೇಸ್​: ಹೈಗ್ರೌಂಡ್ ಪೊಲೀಸರಿಂದ ಡಾ. ಸೌಂದರ್ಯ ಕೊಠಡಿ ಮಹಜರು

By

Published : Jan 29, 2022, 4:12 PM IST

BSY granddaughter suicide case: ಮಾಜಿ ಸಿಎಂ ಯಡಿಯೂರಪ್ಪ ಅವರ ಮೊಮ್ಮಗಳು, ವೈದ್ಯೆ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿರುವ ಕೊಠಡಿಯನ್ನು ಹೈಗ್ರೌಂಡ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

spot inspection by high ground police under soundarya suicide case
ಸೌಂದರ್ಯ ಆತ್ಮಹತ್ಯೆ ಪ್ರಕರಣದ ತನಿಖೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ಮೊಮ್ಮಗಳು, ವೈದ್ಯೆ ಸೌಂದರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ವಿಭಾಗದ ಹೈಗ್ರೌಂಡ್ ಪೊಲೀಸರು ಸೌಂದರ್ಯ ತನ್ನ ಕುಟುಂಬದೊಂದಿಗೆ ವಾಸವಿದ್ದ ಶ್ಯಾಂಗ್ರಿಲಾ ಹೋಟೆಲ್ ಪಕ್ಕದಲ್ಲಿರುವ ಅಪಾರ್ಟ್​ಮೆಂಟ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿರುವ ಕೊಠಡಿಯನ್ನು ಮಹಜರು ಮಾಡುವ ಉದ್ದೇಶದಿಂದ ಆಗಮಿಸಿದ ಪೊಲೀಸರು ಮೃತ ಸೌಂದರ್ಯ ಅವರ ಪತಿಗಾಗಿ ಸುಮಾರು ಹೊತ್ತು ಕಾದ ಪ್ರಸಂಗ ನಡೆಯಿತು.

ಇದನ್ನೂ ಓದಿ:ಮಾಜಿ ಸಿಎಂ ಮೊಮ್ಮಗಳ ನಿಧನ; ಬಿಎಸ್‌ವೈ ನಿವಾಸಕ್ಕೆ ರಾಜ್ಯಪಾಲ ಗೆಹ್ಲೋಟ್ ಭೇಟಿ: ಸಾಂತ್ವನ

ಪತಿ ಡಾ. ನೀರಜ್ ಬೆಳಗ್ಗೆಯಿಂದ ಮನೆಯಲ್ಲಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಾಹ್ನದವರೆಗೆ ಅವರಿಗಾಗಿ ಕಾಯಬೇಕಾಯಿತು. ಅವರು ಬಂದ ನಂತರ ಮಹಜರು ಪ್ರಕ್ರಿಯೆ ನಡೆಸಲಾಯಿತು ಎಂದು ತಿಳಿದುಬಂದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details