ಕರ್ನಾಟಕ

karnataka

ETV Bharat / city

ಕಳ್ಳರ ಕೈಚಳಕ : ಕಾರ್ ಗ್ಲಾಸ್ ಒಡೆದು, ಲ್ಯಾಪ್​ ಟಾಪ್​, ಮೊಬೈಲ್​ ಎಗರಿಸಿದ ಖದೀಮರು - universel mobile shop in bangalore

ಕಾರಿನ ಗ್ಲಾಸ್ ಒಡೆದು ಲ್ಯಾಪ್​ಟಾಪ್, ಚೆಕ್ ಬುಕ್, ಬ್ಲೂಟೂತ್ ಹೆಡ್ ಫೋನ್, ಬ್ಯಾಗ್ ನಲ್ಲಿದ್ದ ದುಬಾರಿ ಬೆಲೆಯ ಮೊಬೈಲ್ ಸೇರಿ ಪ್ರಮುಖ ದಾಖಲೆಗಳು ಮತ್ತು ಕಾರಿನಲ್ಲಿ ಇದ್ದ 15 ಸಾವಿರ ರೂಪಾಯಿ ಹಣವನ್ನ ಕದ್ದು ಖದೀಮರು ಪರಾರಿಯಾಗಿದ್ದಾರೆ.

ಕಾರ್ ಗ್ಲಾಸ್ ಒಡೆದು ಕಳ್ಳತನ

By

Published : Oct 10, 2019, 2:52 PM IST

ಬೆಂಗಳೂರು: ನಗರದ ಹೆಚ್ಎಸ್ಆರ್ ಲೇಔಟ್​ನಲ್ಲಿ ಕಾರಿನ ಗ್ಲಾಸ್ ಒಡೆದಿರುವ ಖದೀಮರು ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ.

ಚೇತನ್ ಪ್ರಕಾಶ್ ಎಂಬುವರು ತಮ್ಮ ಕಾರನ್ನ ಯುನಿವರ್ಸೆಲ್ ಮೊಬೈಲ್ ಶಾಪ್ ಬಳಿ ಪಾರ್ಕ್ ಮಾಡಿ ಶಾಪಿಂಗ್​ಗೆ ಹೋಗಿದ್ದರು. ಈ ವೇಳೆ ಕಾರಿನ ಹಿಂಬದಿ ಗ್ಲಾಸ್ ಒಡೆದು ಲ್ಯಾಪ್ ಟಾಪ್, ಚೆಕ್ ಬುಕ್, ಬ್ಲೂಟೂತ್ ಹೆಡ್ ಫೋನ್, ಬ್ಯಾಗ್ ನಲ್ಲಿದ್ದ ದುಬಾರಿ ಬೆಲೆಯ ಮೊಬೈಲ್ ಸೇರಿ ಪ್ರಮುಖ ದಾಖಲೆಗಳು ಮತ್ತು ಕಾರಿನಲ್ಲಿದ್ದ 15 ಸಾವಿರ ರೂಪಾಯಿ ಹಣವನ್ನ ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಚೇತನ ಪ್ರಕಾಶ್​ ಘಟನೆ ನಡೆದ ತಕ್ಷಣ ಹೆಚ್ಎಸ್ಆರ್​ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಹಿಂದೆಯೂ ಇದೇ ರೀತಿ ಹಲವು ಕಾರುಗಳ ಗ್ಲಾಸ್​ ಒಡೆದು ಕಳ್ಳರು ಕೈಚಳಕ ತೋರಿಸಿದ್ದಾರೆ.

For All Latest Updates

ABOUT THE AUTHOR

...view details