ಬೆಂಗಳೂರು:ಕೊರೊನಾ ವಿರುದ್ಧ ಹೋರಾಡುತ್ತಿರುವ ಪೊಲೀಸರ ಆರೋಗ್ಯ ವೃದ್ಧಿಗೆ ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದಲ್ಲಿ ಪುರೋಹಿತರು ವಿಶೇಷ ಪೂಜೆ ಸಲ್ಲಿಸಿದರು. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನಗರ ಪೊಲೀಸರ ಆರೋಗ್ಯ ಕ್ಷೇಮವಾಗಿರಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು.
ದೊಡ್ಡ ಗಣಪತಿ ದೇವಾಲಯದಲ್ಲಿ ಆರಕ್ಷಕರ ಆರೊಗ್ಯ ವೃದ್ಧಿಗೆ ವಿಶೇಷ ಪೂಜೆ - ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನಗರ ಮತ್ತು ರಾಜ್ಯ ಪೊಲೀಸರ ಆರೋಗ್ಯ ಕ್ಷೇಮವಾಗಿರಲಿ ಎಂದು ದೊಡ್ಡ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ದೊಡ್ಡ ಗಣಪತಿ ದೇವಾಲಯ
ಭಾಸ್ಕರ್ ರಾವ್ ಅವರು ಮಾತನಾಡಿ, ಪೊಲೀಸರ ಆರೋಗ್ಯ ಕ್ಷೇಮಕ್ಕಾಗಿ ದೊಡ್ಡ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇಲ್ಲಿನ ಪುರೋಹಿತರು ನಮಗೆಲ್ಲ ಆಶೀರ್ವಾದ ಮಾಡಿದ್ದಾರೆ. ದೇವಸ್ಥಾನಗಳಿಗೆ ಬಂದರೆ ಸಕಾರಾತ್ಮಕ ಶಕ್ತಿ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.