ಬೆಂಗಳೂರು: ರಾಜ್ಯ ನಾಯಕರಿಗೆ ಪಕ್ಷವನ್ನು ಯಾವ ರೀತಿ ಸಂಘಟಿಸಬೇಕು ಎಂಬುದನ್ನು ತಿಳಿಸಲು ಮೂರು ದಿನ ನಾಯಕತ್ವ ಕುರಿತು ತರಬೇತಿ ಶಿಬಿರ ನಡೆಸಲು ನಿರ್ಧರಿಸಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಸಂಘಟಿಸಲು ರಾಜ್ಯ ನಾಯಕರಿಗೆ ಸ್ಪೆಷಲ್ ಟ್ರೈನಿಂಗ್: ವೇಣುಗೋಪಾಲ್
ರಾಜ್ಯ ನಾಯಕರಿಗೆ ಪಕ್ಷವನ್ನು ಯಾವ ರೀತಿ ಸಂಘಟಸಿಬೇಕು ಎಂಬುದನ್ನು ತಿಳಿಸಲು ಮೂರು ದಿನ ನಾಯಕತ್ವ ಕುರಿತು ತರಬೇತಿ ಶಿಬಿರ ನಡೆಸಲು ನಿರ್ಧರಿಸಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರಣಿ ಸಭೆಗಳ ಬಳಿಕ ಮಾತನಾಡಿದ ಅವರು, ಮೂರು ವಾರದೊಳಗೆ ಕೆಪಿಸಿಸಿ ಸಮಿತಿಗಳಿಗೆ ಪದಾಧಿಕಾರಿಗಳ ನೇಮಕಕ್ಕೆ ಸೂಚನೆ ನೀಡಲಾಗಿದೆ. ನಂತರ ಡಿಸಿಸಿ, ಬ್ಲಾಕ್ ಮಟ್ಟದಲ್ಲೂ ಪದಾಧಿಕಾರಿಗಳನೇಮಕವಾಗುತ್ತೆ. ಬೂತ್ ಮಟ್ಟದಲ್ಲಿ ಕೂಡ ಸಮಿತಿಗಳನ್ನು ಪುನರ್ ಸಂಘಟಿಸಿ ಪಕ್ಷ ಸಂಘಟನೆಗೆ ನಿರ್ಧರಿಸಲಾಗಿದ್ದು, ಪದಾಧಿಕಾರಿಗಳ ಆಯ್ಕೆಗೆ ಅವರ ಅರ್ಹತೆಯೇ ಮಾನದಂಡವಾಗಿರಲಿದ ಎಂದರು.
ಲೋಕಸಭೆ ಪರಾಜಿತ ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಸಿದ್ದು, ಲೋಕಸಭೆ ಚುನಾವಣೆಯಲ್ಲಾದ ಹಿನ್ನೆಡೆಯ ಕುರಿತು ಸುದೀರ್ಘ ಚರ್ಚೆ ನಡೆಸಿದ್ದೇವೆ ಎಂದರು. ಸಭೆಯಲ್ಲಿ ಹಿರಿಯರಿಂದ ಬೂತ್ ಮತ್ತು ಬ್ಲಾಕ್ ಸಮಿತಿಗಳ ನಡುವೆ ಪಂಚಾಯತಿ ಮಟ್ಟದ ಸಮಿತಿ ಕೂಡ ರಚನೆಯಾಗಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಇವೆಲ್ಲದರ ಮರು ಸಂಘಟನೆ ಮುಂದಿನ ಮೂರು ತಿಂಗಳಲ್ಲಿ ಆಗಲಿದೆ ಎಂದರು.