ಬೆಂಗಳೂರು: ಸಂಕ್ರಾಂತಿ ಹಬ್ಬ ಮತ್ತು ಶಬರಿಮಲೆ ಯಾತ್ರೆ ಪ್ರಯುಕ್ತ ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ರೈಲು ಸಂಚಾರ ಆರಂಭಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಕ್ರಾಂತಿ ಸ್ಪೆಷಲ್: ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ರೈಲು ಸಂಚಾರ - ನೈಋತ್ಯ ರೈಲ್ವೆ ಇಲಾಖೆ ಪ್ರಕಟಣೆ
ಶಬರಿಮಲೆ ಯಾತ್ರೆ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನದಟ್ಟಣೆ ಹೆಚ್ಚಾಗುವುದರಿಂದ ಯಶವಂತಪುರ- ಬೆಳಗಾವಿ- ಯಶವಂತಪುರ (06597-06598) ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ತಿಳಿಸಿದೆ.
ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ರೈಲು ಸಂಚಾರ
ಹಬ್ಬದ ಪ್ರಯುಕ್ತ ಜನದಟ್ಟಣೆ ಹೆಚ್ಚಾಗುವುದರಿಂದ ಯಶವಂತಪುರ- ಬೆಳಗಾವಿ- ಯಶವಂತಪುರ (06597-06598) ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ ಎಂದು ಹೇಳಿದೆ. ಯಶವಂತಪುರ ನಿಲ್ದಾಣದಿಂದ ಜನವರಿ 13 ರಂದು ರಾತ್ರಿ 9.30 ಕ್ಕೆ (ರೈಲು ಸಂಖ್ಯೆ 06597) ಹೊರಡುವ ರೈಲು ಮರುದಿನ 8.25 ಕ್ಕೆ ಬೆಳಗಾವಿ ತಲುಪುತ್ತದೆ. ಮರಳಿ ಜನವರಿ 16 ರಂದು ರಾತ್ರಿ 9.20 ಕ್ಕೆ (ರೈಲು ಸಂಖ್ಯೆ 06598) ಹೊರಟು ಮರುದಿನ ಬೆಳಗ್ಗೆ 8.30 ಕ್ಕೆ ಯಶವಂತಪುರ ನಿಲ್ದಾಣ ತಲುಪುತ್ತದೆ ಎಂದು ಮಾಹಿತಿ ನೀಡಿದೆ.