ಕರ್ನಾಟಕ

karnataka

ETV Bharat / city

ಪ್ರಯಾಣಿಕರೇ ಗಮನಿಸಿ... ಕ್ರಿಸ್ಮಸ್ ಮತ್ತು ಶಬರಿಮಲೆ ಭಕ್ತರಿಗೆ ವಿಶೇಷ ರೈಲು ವ್ಯವಸ್ಥೆ - ಕ್ರಿಸ್ಮಸ್ ಮತ್ತು ಶಬರಿಮಲೆ ಪ್ರಯಾಣಿಕರಿಗೆ ವಿಶೇಷ ರೈಲು

ಸಾರ್ವಜನಿಕರ ಅನುಕೂಲಕ್ಕಾಗಿ ಕ್ರಿಸ್ಮಸ್ ಮತ್ತು ಶಬರಿಮಲೆ ಪೂಜೆ ಹೋಗುವ ಪ್ರಯಾಣಿಕರಿಗೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

Special train
ಕ್ರಿಸ್ಮಸ್ ಮತ್ತು ಶಬರಿಮಲೆ ಭಕ್ತರಿಗೆ ವಿಶೇಷ ರೈಲು ವ್ಯವಸ್ಥೆ.

By

Published : Dec 24, 2019, 9:34 PM IST

ಬೆಂಗಳೂರು : ಸಾರ್ವಜನಿಕರ ಅನುಕೂಲಕ್ಕಾಗಿ ಕ್ರಿಸ್ಮಸ್ ಮತ್ತು ಶಬರಿಮಲೆ ಪೂಜೆ ಹೋಗುವ ಪ್ರಯಾಣಿಕರಿಗೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

ರೈಲ್ವೇ ನಿಲ್ದಾಣ ಬೆಂಗಳೂರಿನಿಂದ ಎರ್ನಾಕುಲಂ - ಕೃಷ್ಣರಾಜಪುರಂ ಸ್ಪೆಷಲ್ ಎಕ್ಸ್‌ಪ್ರೆಸ್‌ ವಿಶೇಷ ಶುಲ್ಕದಲ್ಲಿ ನಿಯೋಜಿಸಲಾಗಿದೆ.‌‌ ರೈಲು ಸಂಖ್ಯೆ 06547 ಬೆಂಗಳೂರು - ಎರ್ನಾಕುಲಂ ಸ್ಪೆಷಲ್ ಎಕ್ಸ್‌ಪ್ರೆಸ್ 28 ರಂದು ಸಂಜೆ 6:45 ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 06:00 ಗಂಟೆಗೆ ಎರ್ನಾಕುಲಂ ತಲುಪುತ್ತದೆ. ನಂತರ ಎರ್ನಾಕುಲಂ - ಕೃಷ್ಣರಾಜಪುರಂ ಸ್ಪೆಷಲ್ ಎಕ್ಸ್‌ಪ್ರೆಸ್ 29 ರಂದು ಸಂಜೆ 7 ಗಂಟೆಗೆ ಎರ್ನಾಕುಲಂನಿಂದ ಹೊರಟು ಮರುದಿನ ಬೆಳಗ್ಗೆ 6:50 ಗಂಟೆಗೆ ಕೃಷ್ಣರಾಜಪುರಂ ತಲುಪಲಿದೆ.

ಈ ರೈಲು ವೈಟ್‌ಫೀಲ್ಡ್, ಬಂಗಾರ್‌ಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರು, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂರ್ ಮತ್ತು ಅಲುವಾ ಮಾರ್ಗದಲ್ಲಿ ಸಂಚರಿಸುತ್ತದೆ. ಇನ್ನು ಇದರ ಜೊತೆಗೆ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ- 06547 ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೃಷ್ಣರಾಜಪುರಂನಲ್ಲಿ ನಿಲ್ಲುತ್ತದೆ.

ಈ ರೈಲಿನಲ್ಲಿಎಸಿ ಬೋಗಿ, ಎರಡನೇ ದರ್ಜೆಯ ಸ್ಲೀಪರ್ , ದ್ವಿತೀಯ ದರ್ಜೆ ಮತ್ತು ಲಗೇಜ್ ಇಡಲು ವ್ಯವಸ್ಥೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೇ ವಿಭಾಗ ಪ್ರಕಟಣೆ ಹೊರಡಿಸಿದೆ.

ABOUT THE AUTHOR

...view details