ಕರ್ನಾಟಕ

karnataka

ETV Bharat / city

OMICRON ಪತ್ತೆಗೆ ಬಂತು ವಿಶೇಷ ಆರ್​ಪಿಸಿಆರ್ ಕಿಟ್.. ವರದಿ ಕಾಯುವಿಕೆಗೆ ಬ್ರೇಕ್​

A special RT-PCR Kit ready to detect Omicron: ರೂಪಾಂತರಿ ಒಮಿಕ್ರಾನ್ ಪತ್ತೆಗೆ ವಿಶೇಷ ಆರ್​ಟಿ-ಪಿಸಿಆರ್ ಕಿಟ್ ತಯಾರಾಗಿದೆ. 2-3 ವಾರದೊಳಗೆ ಸರ್ಕಾರದಿಂದ ಅಧಿಕೃತ ಒಪ್ಪಿಗೆ ಪಡೆದು ಈ ಕಿಟ್​ ಬಳಕೆಗೆ ಬರಲಿದೆ.

special RT-PCR kit for detection of omicron
ಒಮಿಕ್ರಾನ್​​ ಪತ್ತೆಗೆ ವಿಶೇಷ ಆರ್​ಟಿ-ಪಿಸಿಆರ್ ಕಿಟ್ ತಯಾರಿ

By

Published : Jan 13, 2022, 3:11 PM IST

ಬೆಂಗಳೂರು: ಇನ್ಮುಂದೆ ಕೆಲವೇ ಗಂಟೆಯಲ್ಲಿ ರೂಪಾಂತರಿ ಒಮಿಕ್ರಾನ್​​ ಇದೆಯೋ, ಇಲ್ಲವೋ ಎಂಬುದು ಪತ್ತೆಯಾಗಲಿದೆ. ಹೌದು, ರೂಪಾಂತರಿ ಒಮಿಕ್ರಾನ್ ಪತ್ತೆಗೆ ವಿಶೇಷ ಆರ್​ಟಿ-ಪಿಸಿಆರ್ ಕಿಟ್ ತಯಾರಾಗಿದೆ.

ದಿನಕ್ಕೊಂದು ಸ್ವರೂಪ ತಾಳುತ್ತಿರುವ ಡೆಡ್ಲಿ ವೈರಸ್ 30ಕ್ಕೂ ಹೆಚ್ಚು ಮ್ಯೂಟೇಷನ್ ಹೊಂದಿದೆ. ಹೀಗಾಗಿಯೇ ಒಮಿಕ್ರಾನ್ ಬಗ್ಗೆ ವೇರಿಯೆಂಟ್ ಆಫ್ ಕನ್ಸರ್ನ್​​ (variant of concern) ಅಂತ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಆರ್​​ಟಿ-ಪಿಸಿಆರ್ ಟೆಸ್ಟ್ ಮಾಡಿದಾಗಲೂ ಈ ಒಮಿಕ್ರಾನ್ ಸೋಂಕು ಪತ್ತೆಯಾಗುತ್ತಿಲ್ಲ. ಇದಕ್ಕಾಗಿ ಸದ್ಯ ಜಿನೋಮಿಕ್ ಸೀಕ್ವೆನ್ಸ್ ಮೊರೆ ಹೋಗಬೇಕಿದೆ.

ಅಧಿಕ ಸಮಯ ತೆಗೆದುಕೊಳ್ಳುವ ಜಿನೋಮಿಕ್ ಸೀಕ್ವೆನ್ಸ್:

ಕೊರೊನಾ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ರಕ್ತದ ಮಾದರಿಯನ್ನು ಹಾಕಿದ ಕೂಡಲೇ ಫಲಿತಾಂಶ ಬಂದು ಬಿಡುತ್ತದೆ. ಆದರೆ ಜಿನೋಮಿಕ್ ಟೆಸ್ಟ್​​ನಲ್ಲಿ‌ ಅಷ್ಟು ಸುಲಭವಿಲ್ಲ. ಸ್ಯಾಂಪಲ್ಸ್ ಸಂಗ್ರಹದಿಂದ ಹಿಡಿದು ಲ್ಯಾಬ್​ಗೆ ಕಳುಹಿಸುವವರೆಗೂ ಕ್ವಾಲಿಟಿ ಚೆಕ್ ಮಾಡಬೇಕಾಗುತ್ತದೆ. ಸೀಕ್ವೆನ್ಸ್​​ಗೆ ಕಳುಹಿಸಿದಾಗ ಭಾಗಶಃ ವರದಿ ಸಿದ್ಧವಿರುತ್ತದೆ. ಆದರೆ ಆ ವರದಿ ಅಂತಿಮವಾಗಿ ಡಿಎನ್​​ಎ ಲೈಬ್ರರಿ ಪ್ರಿಪ್ರೇನ್​ಗೆ ಕೆಲ ಸಮಯ ತೆಗೆದುಕೊಳ್ಳುತ್ತದೆ‌. ಇದು ಎರಡು ದಿನಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ.

ಬಳಿಕ ಬಯೋ ಇನ್​ಫಾರ್​​ಮ್ಯಾಟಿಕ್ (bioinformatic) ಆಗಿರುವ ಕಂಪ್ಯೂಟರ್ ಅನಾಲಿಸಿಸ್​ಗೆ ಹೋದಾಗ ಅದು ಲಕ್ಷಾಂತರ ಜೀನ್​ಗಳನ್ನು ಪರಾಮರ್ಶಿಸಲಿದೆ.‌ ನಂತರ ಪ್ರೂಫ್ ರೀಡ್ ಮಾಡಿದ ಬಳಿಕವೇ ಒಮಿಕ್ರಾನ್ ಇದೆಯೋ ಇಲ್ಲವೋ ಎಂದು ಜಿನೋಮ್ ಸೀಕ್ವೆನ್ಸಿಂಗ್​ನಲ್ಲಿ ತಿಳಿಯಲು ಸಾಧ್ಯ. ಇದು ಹತ್ತಾರು ಹಂತಗಳನ್ನು ದಾಟಿ ಬರಲಿದ್ದು, ಹೆಚ್ಚಿನ ಸಮಯ ಹಿಡಿಯಲಿದೆ.

ವಿಶೇಷ ಆರ್​ಟಿ-ಪಿಸಿಆರ್ ಕಿಟ್.... ಡಾ. ಮಂಜುನಾಥ್​ ಮಾಹಿತಿ

ಹೀಗೆ ಅಧಿಕ ಸಮಯ ತೆಗೆದುಕೊಳ್ಳುತ್ತಿರುವುದು ರೋಗ ಹರಡುವಿಕೆಗೆ ದಾರಿ ಮಾಡಿಕೊಟ್ಟಂತಾಗಿತ್ತು. ಕೊರೊನಾ ಸೋಂಕಿನಂತೆ ರೂಪಾಂತರಿ ಒಮಿಕ್ರಾನ್​​ ಸುಲಭವಾಗಿ ಪತ್ತೆಯಾಗದೇ, ಜಿನೋಮಿಕ್ ಸೀಕ್ವೆನ್ಸ್ ವರದಿ ಬರುವವರೆಗೂ ಕಾಯಬೇಕಾಗಿತ್ತು. ಆದರೆ ಇನ್ಮುಂದೆ ಕೆಲವೇ ಗಂಟೆಯಲ್ಲಿ ರೂಪಾಂತರಿ ಒಮಿಕ್ರಾನ್​​ ಇದೆಯೋ, ಇಲ್ಲವೋ ಎಂಬುದು ಪತ್ತೆಯಾಗಲಿದೆ.

ವಿಶೇಷ ಆರ್​ಟಿ-ಪಿಸಿಆರ್ ಕಿಟ್:

ಹೌದು, ರೂಪಾಂತರಿ ಒಮಿಕ್ರಾನ್ ಪತ್ತೆಗೆ ವಿಶೇಷ ಆರ್​ಟಿ-ಪಿಸಿಆರ್ ಕಿಟ್ ತಯಾರಾಗಿದೆ. ಕೊರೊನಾ ರೀತಿಯೇ ಒಮಿಕ್ರಾನ್ ಕೇಸ್​ಗಳನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ. ತಿಂಗಳೊಳಗೆ ನೂತನ ಒಮಿಕ್ರಾನ್ ಆರ್​ಟಿ ಪಿಸಿಆರ್ ಟೆಸ್ಟ್ ಕಿಟ್ ಆಗಮಿಸಲಿದೆ‌. ಈ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿರುವ ತಜ್ಞ ವೈದ್ಯ ಡಾ. ಮಂಜುನಾಥ್ ಖಚಿತಪಡಿಸಿದ್ದಾರೆ.‌

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಒಮಿಕ್ರಾನ್ ಪತ್ತೆಗೆ ನೂತನ ಆರ್​ಟಿಪಿಸಿಆರ್ ಸಾಧನ ರೆಡಿ ಇದ್ದು, ಈಗಾಗಲೇ 15 ಸಾವಿರ ಕಿಟ್ ತಯಾರಿ ಕೂಡ ಆಗಿದೆ. ನಿಮ್ಹಾನ್ಸ್ ಆಸ್ಪತ್ರೆಯ ವೈರಾಲಜಿ ತಜ್ಞ ಡಾ. ವಿ. ರವಿ ಸದಸ್ಯರಾಗಿರುವ ತಂಡದಿಂದ ಇದು ತಯಾರಾಗಿದೆ. 2-3 ವಾರದೊಳಗೆ ಸರ್ಕಾರದಿಂದ ಅಧಿಕೃತ ಒಪ್ಪಿಗೆ ಪಡೆದು ಬರಲಿದೆ ಎಂದರು.

ಈ ಮೊದಲು ಆರ್​ಟಿಪಿಸಿಆರ್ ಟೆಸ್ಟ್​ನಲ್ಲಿ N ಜೀನ್, R1 ಜೀನ್ ಪರೀಕ್ಷೆ ಮಾಡಲಾಗುತ್ತಿತ್ತು. ಇತ್ತೀಚೆಗೆ ಬಂದಿರುವ ಆರ್​ಟಿಪಿಸಿಆರ್ ಕಿಟ್​ನಲ್ಲಿ S ಜೀನ್ ಟೆಸ್ಟ್ ಮಾಡಬಹುದು. S ಜೀನ್ ಅನುಮಾನದ ಹಿನ್ನೆಲೆ ಕೋವಿಡ್ ಸೋಂಕಿತರ ಜಿನೋಮಿಕ್ ಸೀಕ್ವೆನ್ಸ್​ಗೆ ಕಳುಹಿಸಲಾಗುತ್ತದೆ. ಆಗ ಮಾತ್ರ ಒಮಿಕ್ರಾನ್ ಸೋಂಕಿತರ ಪತ್ತೆ ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಕೆಂಪೇಗೌಡ ವಿಮಾನ ನಿಲ್ದಾಣದ ನಾಲ್ವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್

ಮೊದಲು ಒಮಿಕ್ರಾನ್ ಇದ್ರೂ ಕೂಡ ಪತ್ತೆಯಾಗುವುದು ತಡವಾಗುತ್ತಿತ್ತು. ಜಿನೋಮಿಕ್ ಸೀಕ್ವೆನ್ಸ್ ವರದಿಗಾಗಿ ವಾರಗಟ್ಟಲೇ ಕಾಯಬೇಕಾಗಿತ್ತು. ಇದರಿಂದ ಸೋಂಕು ಸಮುದಾಯಕ್ಕೆ ಹೆಚ್ಚು ಹರಡುವ ಅಪಾಯವಿತ್ತು. ಇದೀಗ ಈ ನೂತನ ಆರ್​ಟಿ ಪಿಸಿಆರ್ ಕಿಟ್ ನಿಂದ ಬೇಗ ಸೋಂಕು ಪತ್ತೆ ಹಚ್ಚಬಹುದು ಅಂತ ಡಾ. ಮಂಜುನಾಥ್​ ತಿಳಿಸಿದ್ದಾರೆ.

ABOUT THE AUTHOR

...view details