ಬೆಂಗಳೂರು :ವಿಧಾನಸೌಧದಲ್ಲಿ ಚುನಾವಣಾ ಸುಧಾರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸುವ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾವುಕರಾದ ಘಟನೆ ನಡೆಯಿತು.
ಚುನಾವಣಾ ಸುಧಾರಣೆ ಬಗ್ಗೆ ವಿವರಿಸುತ್ತಿದ್ದ ಕಾಗೇರಿ ಅವರು, ನಾವು ಸೀಮಿತವಾದ ಚೌಕಟ್ಟಿನಲ್ಲಿ ನಮ್ಮನ್ನು ಕಟ್ಟಿ ಹಾಕೊಂಡಿದ್ದೇವೆ. ಸೃಷ್ಟಿಯ ಸತ್ಯ ಅರಿತುಕೊಳ್ಳಬೇಕಾಗಿದೆ. ಬ್ರಿಟಿಷ್ ಶಿಕ್ಷಣ ಪದ್ದತಿಯಿಂದಾಗಿ ಜೀವನದ ಕಲ್ಪನೆಗಳು ಇಲ್ಲದಂತಾಗಿವೆ ಎಂದು ಹೇಳಿ ಭಾವುಕರಾದರು.
ಚುನಾವಣಾ ಸುಧಾರಣೆ ಬಗ್ಗೆ ಮಾತನಾಡುತ್ತಿದ್ದಾಗ ಭಾವುಕರಾದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.. ನಮ್ಮಲ್ಲಿ ಸಾರ್ಥಕತೆಯ ಭಾವವೇ ಇಲ್ಲದಂತಾಗಿದೆ. ನಂಬಿಕೆಗಳು ಹಾಗೂ ವಿಶ್ವಾಸ ಬರದೇ ಹೋದಲ್ಲಿ ವ್ಯವಸ್ಥೆ ಉತ್ತಮ ರೀತಿ ಮುನ್ನಡೆಯಲು ಸಾಧ್ಯವಿಲ್ಲ.
ಯಾವ ವ್ಯವಸ್ಥೆಯಲ್ಲಿ ನಾವು ಇದ್ದೇವೋ, ಅದನ್ನು ಸರಿಯಾಗಿ ನಡೆಸಬೇಕಾದಲ್ಲಿ ಜ್ಞಾನದ ವಿಸ್ತಾರ ಆಗಬೇಕು. ಆ ಪ್ರಯತ್ನ ನಡೆಯಬೇಕು ಎಂದು ಭಾವುಕರಾಗಿ ಕಣ್ಣೀರು ಹಾಕಿದರು. ಸ್ವಲ್ಪ ಹೊತ್ತು ಮೌನವಾಗಿ, ಧನ್ಯವಾದ ಎಂದು ಅಲ್ಲಿಂದ ನಡೆದು ಹೋದರು.
ಓದಿ:ರಾಮನಗರ ಸಿಇಒ ದಿಟ್ಟ ಕ್ರಮ: 150ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ 'ಹೈಟೆಕ್' ಸ್ಪರ್ಶ